ಪೊಳಲಿಯಲ್ಲಿ ದೀಪಾವಳಿ ಪ್ರಯುಕ್ತ ಟೈಗರ್ಸ್ ಫ್ರೆಂಡ್ಸ್ ಹಾಗೂ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು” ೫೦ ಲೀಟರ್ ತುಪ್ಪದಿಂದ ಹಣತೆ ದೀಪದ ಬೆಳಕಿನ ಹಬ್ಬಕ್ಕೆ ಚಾಲನೆ.
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ಟೈಗರ್ಸ್ ಫ್ರೆಂಡ್ಸ್ ಹಾಗೂ “ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು” ಹಣತೆ ದೀಪದ ಬೆಳಕಿನ ಹಬ್ಬದ ಮೂರನೇ ವರ್ಷಾಚರಣೆಯ ಪ್ರಥಮ ದಿನದಂದು ಪೊಳಲಿ ದೇವಳದ ಅರ್ಚಕ ಕೆ. ರಾಮ್ ಭಟ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ದೇವಳದ. ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ,ಸತ್ಯಜಿತ್ ಸುರತ್ಕಲ್ ,ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು , ಜೀವರಾಜ್ ಶೆಟ್ಟಿ ಅಮ್ಮುಂಜೆಗುತ್ತು, ದೇವದಾಸ್ ಶೆಟ್ಟಿ ಅಮ್ಮುಂಜೆಗುತ್ತು, ಸಂಪತ್ ಕುಮಾರ್ ಶಟ್ಟಿ ,ಕೆ.ಜನಾರ್ಧನ ಶೆಟ್ಟಿ ಪುಂಚಮೆ, ವೆಂಕಟೇಶ್ ನಾವಡ ಪೊಳಲಿ, ಯಶವಂತ ಪೊಳಲಿ, ಸಂತೋಷ್ ಶೆಟ್ಟಿ ಪುಂಚಮೆ, ಸುನೀಲ್ ಪೊಳಲಿ, ಮುಂತಾದವರು ಉಪಸ್ಥಿತರಿದ್ದರು. ತೆಂಕಎಡಪದವು ಶ್ರೀ ರಾಮ ಮಕ್ಕಳ ಕುಣಿತ ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ ನಡೆಯಿತು.




