ಕೃಷ್ಣಾಪುರ ದಂಪತಿಗೆ ಬಿಜೆಪಿ ಯುವ ಮೋರ್ಚಾದಿಂದ ಮನೆ
ಕೈಕಂಬ : ಬಿಜೆಪಿ ಯುವ ಮೋರ್ಚಾ ಮಂಗಳೂರು ಉತ್ತರ ಮಂಡಲ ವತಿಯಿಂದ ಅ.೨೩ರಂದು ಸುರತ್ಕಲ್ ಜಂಕ್ಷನ್‌ನಲ್ಲಿ ನಡೆದ ದೀಪಾವಳಿ ಸಂಭ್ರಮ ಕಾರ್ಯಕ್ರಮದಲ್ಲಿ ಕೃಷ್ಣಾಪುರ ೬ನೇ ಬ್ಲಾಕ್ ನಿವಾಸಿ ನಾಗೇಶ್-ಸುನೀತಾ ದಂಪತಿಗೆ ನೂತನ ಮನೆ ‘ಓಂಕಾರ’ ಮನೆ ಹಸ್ತಾಂತರಿಸಲಾಯಿತು.
ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ನೂತನ ಮನೆಯ ಕೀಲಿಕೈನ್ನು ನಾಗೇಶ್ ದಂಪತಿಗೆ ಹಸ್ತಾಂತರಿಸಿದರು. ಮಂಗಳೂರು ನಗರ ಉತ್ತರ ಯುವ ಮೋರ್ಚಾ ಹಾಗೂ ಸಹೃದಯಿಗಳ ಪೂರ್ಣ ಸಹಕಾರದಿಂದ ಕೃಷ್ಣಾಪುದ ದಂಪತಿಗೆ ಮನೆ ನಿರ್ಮಿಸಲಾದ ಬಿಜೆಪಿಗರ ಸೇವಾ ಕಾರ್ಯಕ್ಕೆ ನಾಗರಿಕ ಸಮಾಜದಿಂದ ಅತೀವ ಮೆಚ್ಚುಗೆ ವ್ಯಕ್ತವಾಗಿದೆ.