ಪೊಳಲಿಯಲ್ಲಿ ದೀಪಾವಳಿ ಪ್ರಯುಕ್ತ ಟೈಗರ್ಸ್ ಫ್ರೆಂಡ್ಸ್ ಹಾಗೂ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು” ಹಿಂದೂ ಜಾಗರಣಾ ವೇದಿಕೆ ಸುದರ್ಶನ ಘಟಕ ಪೊಳಲಿ ಇದರ ವತಿಯಿಂದ ಗೋಪೂಜೆ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ಟೈಗರ್ಸ್ ಫ್ರೆಂಡ್ಸ್ ಹಾಗೂ “ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು” ಹಣತೆ ದೀಪದ ಬೆಳಕಿನ ಹಬ್ಬದ ಮೂರನೇ ವರ್ಷಾಚರಣೆಯ ಮೂರನೆ ದಿನದಂದು ಗೋಪೂಜೆ ನೆರವೇರಿತು.ಪೊಳಲಿ ದೇವಳದ ಅರ್ಚಕ ಕೆ. ರಾಮ್ ಭಟ್ ಗೋ ಪೂಜೆ ನೆರವೇರಿಸಿದರು.
ಟೈಗರ್ಸ್ ಫ್ರೆಂಡ್ಸ್ ಮತ್ತು ಪುರಲ್ದ ಪ್ಪೆನ ಮೋಕೆದ ಬೊಳ್ಳಿಲು ಹಾಗೂ ಹಿಂದೂ ಜಾಗರಣಾ ವೇದಿಕೆ ಸುದರ್ಶನ ಘಟಕದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವೆಂಕಟೇಶ್ ನಾವಡ ಪೊಳಲಿ, ಚೇರ ಹಿಮಕರ್ ರಾವ್, ಸಂತೋಷ್ ಶೆಟ್ಟಿ ಪುಂಚಮೆ, ಸುನೀಲ್ ಪೊಳಲಿ, ಮುಂತಾದವರು ಇದ್ದರು.