ಬಂಟ್ವಾಳ: ಈ ದೇಶದ ಅತ್ಯಂತ ಪ್ರಬಾವಶಾಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಅನುಷ್ಟಾನಗೊಳಿಸಿದ 20 ಅಂಶದ ಕಾರ್ಯಕ್ರಮಗಲ ಪರಿನಾಮವಾಗಿ ಇಂದು ಬಡವರು ಪಟ್ಟಾದಾರರಾಗಿ, ಸ್ವಾವಲಂಬಿಯಾಗಿ ಬದುಕು ನಡೆಸುವಂತಾಗಿದೆ. ಇಂದಿರಾ ಅವರ ಆಶಯಂದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರಿ ಸವಲತ್ತು ಸುಲಭವಾಗಿ ದೊರೆಯುವ ದೃಷ್ಠಿಯಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನತಾ ದರ್ಶನ ಎಂಬ ಜನಪರ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದ್ದಾರೆ.
ದ.ಕ.ಜಿಲ್ಲಾಡಳಿತ, ಬಂಟ್ವಾಳ ತಾಲೂಕು ಆಡಳಿತ, ತಾಲೂಕು ಪಂಚಾಯತು, ಪುರಸಭೆ ಹಾಗೂ ತಾಲೂಕಿನ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ ಬುಧವಾರ ಬಿ.ಸಿರೋಡಿನ ಸಾರ್ವಜನಿಕ ರಂಗ ಮದಿರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಲಾನುಭವಿ ಲೀಲಾ ಕೊರಗ ಸಚಿವರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಬಡವರಿಗೆ ಜಮೀನು ಹಕ್ಕು, ವಸತಿ ಯೋಜನೆಗಳು, ಮಕ್ಕಳಿಗೆ ಬಿಸಿಯೂಟ ಮೊದಲಾದ ಕ್ರಾಂತಿಕಾರಿ ಯೋಜನೆಗಳು ಸಾಮಾಜಿಕ ಬದಲಾವಣೆಗೆ ಪುರಕವಾಗಿದೆ ಎಂದ ಸಚಿವರು ತನ್ನ ಆಡಳಿತಾವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದು ಸಂಮಂಜಸ ನ್ಯಾಯವಂಚಿತ ಜನತೆಗೆ ನ್ಯಾಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಬಂಟ್ವಾಳ ಕ್ಕೆ ಮಿನಿ ವಿದಾನ ಸೌಧ, ಕೆಎಸ್ಆಟರ್ ಟಿಸಿ ಬಸ್ಸು ನಿಲ್ದಾಣ, ಟ್ರಾಫಿಕ್ ಪೋಲೀಸ್ ಠಾಣೆ, ಪುರಸಭೆಗೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ, ಬಂಟ್ವಾಳ ಸಮಗ್ರ ಒಳಚರಂಡಿ ಯೋಜನೆಗೆ ಹೆಚ್ಚುವರಿ ಅನುದಾನ, ತಾಲೂಕಿಗೆ ಐದು ಬಹುಗ್ರಾಮ ಯೋಜನೆ, ನಿರ್ಮಲ ಬಂಟ್ವಾಳ ಯೋಜನೆಗೆ 2 ಕೋಟಿ ಅನುದಾನ ಮಂಜೂರಾತಿಯಾಗಿದ್ದು ಶೀರ್ಘದಲ್ಲಿ ಯೋಜನೆಗಳು ಅನುಷ್ಟಾನಗೊಳ್ಳಿದೆ ಎಂದ ಸಚಿವರು ಈಗಾಗಲೇ ಸಹಸ್ರಾರು ಮಂದಿಗೆ ಹೊಸ ಪಡಿತರ ಚೀಟಿ ಹೆಚ್ಚುವರಿಯಾಗಿ ವಿತರಿಸಲಾಗಿದೆ.
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರಿಗೆ ಪರಿಶೀಲನೆ ನಡೆಸಿ ಮೂಮದಿನ ಹಂತದದದಲ್ಲಿ ವಿತರಿಸಲಾಗುವುದು ಎಂದರು.
ದ.ಕಜಿಲ್ಲಾ ಪಂಚಾಯತು ಅಧ್ಗಯಕ್ಷೆ ಆಶಾ ತಿಮ್ಮಪ್ಪ ಗೌಡ, ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮಿನ್, ತಾಲುಕು ಪಂಚಾಯತು ಅಧ್ಯಕ್ಷ ಯಶವಂತ ದೇರಾಜೆ, ಉಪಆದ್ಯಕ್ಷೆ ವಿಲಾಸಿನಿ, ಸೈಆತಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯತು ಮುಖ್ಯಾ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೋಲೀಸ್ ಅಧೀಕ್ಷಕ ಶರಣಪ್ಪ, ಜಿಲ್ಲಾ ಪಂಚಾಐತು ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಮಮತ ಗಟ್ಟಿ, ಸಂತೋಷ್ ಕುಮಾರ್ ರೈ, ಚೆನ್ನಪ್ಪ ಕೋಟ್ಯಾನ್,, ಪ್ರಮುಖರಾದ ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ ಉಪಸ್ಥಿತರಿದ್ದರು.



