ಸಜಿಪನಡು: ಕಂಚಿನಡ್ಕಪದವು ಹಿಂದೂ ರುದ್ರ ಭೂಮಿ ಉಚಿತ, ಆಂಬುಲೆನ್ಸ್ ಲೋಕಾರ್ಪಣೆ
ಬಂಟ್ವಾಳ: ತಾಲ್ಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವು ಹಿಂದೂ ರುದ್ರ ಭೂಮಿ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ ಮಂಗಳವಾರ ನಡೆಯಿತು.
ಸಜಿಪನಡು ಗ್ರಾಮದ ಕಂಚಿನಡ್ಕಪದವು ಹಿಂದೂ ರುದ್ರ ಭೂಮಿ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆಗೊಳಿಸುತ್ತಿರುವುದು ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದ್ದಾರೆ.
ಇಲ್ಲಿನ ಸಜಿಪನಡು ಗ್ರಾಮದ ಕಂಚಿನಡ್ಕಪದವು ಹಿಂದೂ ರುದ್ರ ಭೂಮಿ ವತಿಯಿಂದ ಮಂಗಳವಾರ ಆಕ್ಷಿಜನ್ ಸಹಿತ ಉಚಿತ ಆಂಬುಲೆನ್ಸ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜಿಲ್ಲಾ ಬಿಜೆಪಿ ಘಟಕ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಮಾತನಾಡಿ, ಈ ಅಂಬುಲೆನ್ಸ್ ೭ ಗ್ರಾಮಗಳ ಜನತೆಗೆ ಉಪಯೋಗವಾಗಲಿದೆ ಎಂದರು. ಜಿಲ್ಲಾ ಬಿಜೆಪಿ ಘಟಕ ಕಾರ್ಯದರ್ಶಿ ಸತೀಶ್ ಕುಂಪಲ, ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಯಶವಂತ ದೇರಾಜೆಗುತ್ತು, ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಪ್ರಗತಿಪರ ಕೃಷಿಕ ಚಿನ್ಮಯ ಸಾಲಿಯಾನ್ ಚೇಳೂರು. ಉದ್ಯಮಿ ಗಣೇಶ್ ಚೇಳೂರು, ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಶ್ಯಾಮ್, ಬಿ ಜೆ ಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಬಂಗೇರ ಆರ್ಯ್ಯಾಪು, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ್ ಅಮೀನ್ ತಲೆಮೊಗರು, ಮಾಜಿ ಅಧ್ಯಕ್ಷ ಗಣಪತಿ ಭಟ್ ಕೋಮಾಲಿ, ಪ್ರಮುಖರಾದ ಹೇಮಂತ್ ಪೂಜಾರಿ ಮುಳ್ಳಿಂಜ,ಪ್ರಶಾಂತ್ ಪೂಜಾರಿ ಕೋಮಾಲಿ, ಶೋಭಾ ಶೆಟ್ಟಿ, ಹರೀಶ್ ಬಂಗೇರ ಕಾಂತುಕೋಡಿ, ಭಾಸ್ಕರ ಕಂಪದಕೋಡಿ, ಭಾಸ್ಕರ ನಾಯಕ್ ಮತ್ತಿತರರು ಇದ್ದರು.