ಸುದ್ದಿ9ಕೈಕಂಬ: ಗಾಂಧೀಜಿಯವರ ಕಣಸು ನನಸಾಗಲು ಕೇವಲ ಮಹಿಳೆಯರಿಂದ ಮಾತ್ರ ಸಾಧ್ಯವಾಗದು ತಾವು ವಾಸಿಸುವ ಮನೆಯ ಗಂಡಸರಲ್ಲಿ ಪ್ರೀತಿಯಿಂದ ಇದ್ದು ಅವರ ವಿಶ್ವಾಸ ಗಳಿಸಿದಾಗ ಮಾತ್ರ ಸ್ವಚ್ಚ ಪರಿಸರ ಜಾಗೃತಿ ಮೂಡಿಸಲು ಮೂಡಿಸಲು ಸಾದ್ಯ .
ಎಂದು ದ.ಕ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗಟ್ರೋಡ್ ವೇಗಸ್ ಹೇಳಿದರು.
ಅವರು ಗುರುಪುರ ಕೈಕಂಬದ ಪ್ರೀಮಿಯರ್ ಹಾಲ್ ನಲ್ಲಿ ನ.18ರಂದು ಮಂಗಳವಾರ ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ನೇಸರ ಕೇಂದ್ರೀಯ ಸಮನ್ವಯ ಸಮಿತಿ ಇದರ ಜಂಟಿ ಆಶ್ರ್ರಯದಲ್ಲಿ ಮಹಿಳಾ ಸಬಲೀಕರಣ ಮತ್ತು ಸ್ವಚ್ಚ ಪರಿಸರ ಜಾಗೃತಿಗಾಗಿ ಸ್ವ ಸಹಾಯ ಸಂಘಗಳ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಮನೆಯ ಅಭಿವೃದ್ಧಿ ಆಗುವ ಮೂಲಕ ಸಮಾಜದ ಅಭಿವೃದ್ಧಿ ಮಾಡಿ ಶೋಷನೆ ಮುಕ್ತ ಸಮಾಜವನ್ನು
ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ಶ್ಯಕ್ಷಣಿಕವಾಗಿ ರಾಜಕೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಇಂತಹ ಸ್ವಸಹಾಯ ಸಂಘಗಳಲ್ಲಿ ಭಾಗವಹಿಸಿ ತಮ್ಮ ಮನೆಯ ಅಂಗಳದಿಂದ ಸ್ವಚ್ಚಪರಿಸರವನ್ನು ನಿರ್ಮಿಸಲು ನಿರ್ಮಿಸಲು ಸಾಧ್ಯ .
ಸಮಾಜದ ಮಕ್ಕಳು ಮಹಿಳೆಯರು ಲೈಂಗಿಕ ದೌರ್ಜನ್ಯಗಳಿಗೆ ಶೋಷಣೆಗೆ ಒಳಪಟ್ಠಾಗ ಅದನ್ನು ಪ್ರತಿಭಟಿಸಿ ಕಾನೂನು ರೀತಿಯಲ್ಲಿ ಹೋರಾಟ ಮಾಡಿ ತಪ್ಪಿತಸ್ತರನ್ನು ಶಿಕ್ಷೆಗೆ ಗುರಿಪಡಿಸಿ ಸಮಾಜದ ಜಾಗ್ರತಿಗಾಗಿ ಪ್ರಯತ್ನ ಪಡಬೇಕು.
ದ.ಕ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕಿನ 30 ಕಡೆ ಘಟಕ ತೆರೆಯಾಲಾಗಿದೆ ಮಹಿಳೆಯರು ಮಕ್ಕಳು ಶೋಷನೆಗೆ ಒಳಗಾದಾಗ ಯಾವುದೇ ಸಂಧರ್ಭದಲ್ಲಿ ಅವರ ದೂರುಗಳನ್ನು ಸ್ವಿಕರಿಸಲು ಒಂದೇ ಸೂರಿನಡಿ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಮಂಗಳೂರು ತಾಲೂಕಿನ ಮಹಿಳಾ ಮಂಡಲಗಳ ಸ್ಥಾಪಕಾಧ್ಯಕ್ಷೆ ಕೆ.ಎ ರೋಹಿಣಿ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಬಾಲ್ಯದಲ್ಲಿ ಹೆಣ್ಣು ಮಕ್ಕಳು ತನ್ನ ವಿದ್ಯಾಭ್ಯಾಸಕ್ಕೆ ಮನೆಯಿಂದ ಶಾಲೆಗೆ ಸುಮಾರು 6 ಮೈಲು ನಡೆದುಕೊಂಡು ಶಾಲೆಗೆ ಹೋಗುತ್ತಿದ್ದ ಸಂದರ್ಭಹೊಂದಿತ್ತು ಆಕಾಲದಲ್ಲಿ ಹೆಣ್ಣು ಮಕ್ಕಳ ಶೋಷನೆ ಅತ್ಯಾಚರ , ಲೈಂಗಿಕದಂತಹ ಕಿರುಕುಳಗಳು ಇರಲಿಲ್ಲ ಆದರೆ ಇತಿಚೇಗೆ ಹೆಣ್ಣು ಮಕ್ಖಳ ವಿದ್ಯಾಭ್ಯಾಸಕ್ಕೆ ಹೆತ್ತವರು ಹೆದರಿಕೆಯಿಂದ ಶಾಲೆಗೆ ಕಳುಹಿಸುವ ಪರಿಸ್ಥಿತಿ ನಿರ್ಮಾನವಾಗಿದೆ.
ಮಹಿಳೆಯರು ಮನೆಗೆ ಅತಿಥಿಗಳು ಬಂದರೆ ಹೆಣ್ಣು ಮಕ್ಕಳು ಅವರಲ್ಲಿ ಮಾತಾಡುವ ಹಾಗಿರಲಿಲ್ಲ .ದಿನ ನಿತ್ಯ ಬಿಡುವಿಲ್ಲದ ಮಹಿಳೆಯರು ಬೆಳಗ್ಗಿನಿಂದ ರಾತ್ರಿ ವರೆಗೆ ಬಿಡುವಿಲ್ಲದೆ ದಿನಾ ನಿತ್ಯ ಕೆಲಸದಲ್ಲಿ ತೊಡಗಿದರು ಸಂತೋಷ, ನೆಮ್ಮದಿ ಕಾಣುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಮಹಿಳೆಯರ ಹಾಗೂ ಹೆಣ್ಣು ಮಕ್ಕಳು ಶೋಷನೆಗೆ ಒಳಗೊಂಡಿದ್ದಾರೆ.
ಆದರೆ 15 ವರ್ಷಗಳಿಂದ ಸ್ವಸಹಾಯ ಸಂಘಧ ಪರಿಕಲ್ಪನೆಯಿಂದ ಸ್ವ ಸಹಾಯ ಸಂಘದಲ್ಲಿ ತೊಡಗಿಸಿಕೊಂಡು ತಮ್ಮ ಕುಟುಂಬದ ಸಮಾಜದ ಸ್ವಚ್ಚ ಪರಿಸರ ಜಾಗೃತಿ ನಿರ್ಮಿಸಲು ಈ ಅವಕಾಶ ಸಿಕ್ಕಿದೆ ಇದನ್ನು ಸದುಪಯೋಗಿಸಿಕೊಳ್ಳಿ ಎಂದರು.
ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು ಮಕ್ಕಳ ಭವಿಷ್ಯ ರೂಪಿಸಲು ಒಳ್ಳೆ ಸಂಸ್ಕ್ರತಿ ನೀಡಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡಿ ಎಂದು ಮಹಿಳೆಯರಿಗೆ ಕರೆ ನಿಡಿದರು. ಪುರುಷ ಮಹಿಳೆ ಎಂಬ ಭೇದ ಬಾವ ವಿಲ್ಲದೇ ನಾನ ಕಡೆಗಳಲ್ಲಿ 69 ಸ್ವಸಹಾಯ ಸಂಘಗಳನ್ನು ಮಾಡಿದ ದಿಶಾ ಸಂಸ್ಥೆಯ ಕಾರ್ಯಕ್ರಮವನ್ನು ಅವರು ಸ್ಲಾಂಘಿಸಿದರು.
ಅಧ್ಯಕ್ಷತೆಯನ್ನು ಸ್ಪಂದನ ಸ್ವಸಹಾಯ ಸಂಘಗಳ ಅಧ್ಯಕ್ಷೆ ಅನುಸೂಯ ಕಾಜವ ವಹಿಸಿದ್ದರು.
ದಿಶಾ ಟ್ರಸ್ಟ್ ನಿರ್ದೇಶಕ ಸಿಲ್ವೆಸ್ಟರ್ ಡಿ ಸೋಜ ಹಾಗೂ ದಿಶಾ ಟ್ರಸ್ನ ಅಧ್ಯಕ್ಷೆ ಐರಿನ್ ವೇಗಸ್,ಸ್ವ ಸಹಾಯ ಸಂಘಗಳ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಒಕ್ಕೂಟದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಎರ್ಪಡಿಸಲಾಗಿತ್ತು. ಸ್ಪಂದನ ಒಕ್ಕೂಟದ ಕಾರ್ಯದರ್ಶಿ ಸವಿತಾ ಕೊಳವೂರು ಹಾಗೂ ನೇಸರ ಕೇಂದ್ರ ಸಮಿತಿಯ ಜ್ಯೋತಿ ವರದಿ ಮಂಡಿಸಿದರು, ನೋಬರ್ಟ್ ಸಿಕ್ವೇರಾ ಸ್ವಾಗತಿಸಿ ಎಲ್ಸಿ ಡಿ ಸೋಜಾ ಧನ್ಯವಾದ ವಿತ್ತರು. ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.























Good coverage and good effort from suddi9.com