ನೆರೂಲ್‌ನ ಆಶ್ರಯದಲ್ಲಿ ನಡೆಸಲ್ಪಟ್ಟ ಹಿರಿಯ ನಾಗರಿಕರ ದಿನಾಚರಣೆ
ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್ ಇದರ ಅಂಗಸಂಸ್ಥೆ ನೆರೂಲ್ ಅಲ್ಲಿನ ಹಿರಿಯ ನಾಗರಿಕರ ಧಾಮ ಆಶ್ರಯ ಇಲ್ಲಿ ಕಳೆದ ಭಾನುವಾರ ಬಹಳ ವಿಜೃಂಭಣೆಯಿಂದ ಹಿರಿಯ ನಾಗರಿಕರ ದಿನಾಚರಣೆ ಆಚರಿಸಿತು. ಬಿಎಸ್‌ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭಾಕಾರ್ಯಕ್ರಮದಲ್ಲಿ ಉದ್ಯಮಿ ಅನಿಲ್ ಚಂದ್ರಶೇಖರ ಕುರ್ತಡ್ಕರ್ ಮುಖ್ಯ ಅತಿಥಿಯಾಗಿದ್ದರು.
ದಕ್ಷಿಣ ಭಾರತದ ಸಿನಿಮಾ ನಟಿ ಕೃಷಾ ಕುರೂಪ್ ಅವರ ಭರತನಾಟ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಾ ಆರಂಭಗೊಂಡಿದ್ದು ಬಳಿಕ ಹಿರಿಯ ನಾಗರಿಕರು ಗೋಕುಲದ ಯುವ ವಿಭಾಗದ ಸಂಯೋಜನೆಯಲ್ಲಿ ವಿವಿಧ ವಿನೋದಾವಳಿ ಹಾಗೂ ನೃತ್ಯಗಳನ್ನು ಪ್ರದರ್ಶಿಸಿದರು. ಆಶ್ರಯ ನಿವಾಸಿ ರಾಜಮ್ಮ ಶ್ರೀನಿವಾಸ್ ಅವರು ಸುಮಧುರವಾಗಿ ಗೀತೆಯನ್ನಾಡಿದರು. ಕೇರಳ ಪ್ರಾಂತ್ಯದಿಂದ ಪ್ರಾರಂಭಗೊಂಡು ಬಂಗಾಲ, ತಮಿಳನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಕೊನೆಗೊಳಿಸಿದರು. ಭಾರತದ ವಿವಿಧ ರಾಜ್ಯಗಳ ನೃತ್ಯವನ್ನು ಬಹಳ ಉತ್ಸಾಹದಿಂದ ಪ್ರದರ್ಶಿಸಲ್ಪಟ್ಟ ನೃತ್ಯಾವಳಿಗಳು ನೆರೆದ ಪ್ರೇಕ್ಷಕರ ಮನ ಸೂರೆಗೊಳಿಸಿ ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂಬ ಮಾತನ್ನು ಆಶ್ರಯ ನಿವಾಸಿಗಳು ಮತ್ತು ಇತರ ಹಿರಿಯ ನಾಗರಿಕರು ರುಜುವಾತು ಮಾಡಿದರು.
ಈ ಬಾರಿ ಗೋಕುಲ ಕಲಾವೃಂದ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಆಶ್ರಯದ ಮೇಲ್ವಿಚಾರಕರೆ ಲ್ಲರ ಕೂಡುವಿಕೆಯಲ್ಲಿ ಹಿರಿಯ ನಾಗರಿಕರ ದಿನಾಚರಣೆ ಬಹಳ ಯಶಸ್ವಿಯಾಗಿ ನಡೆಸಲ್ಪಟ್ಟಿದ್ದು ಸಂಘದ ಸದಸ್ಯ ಪಿ.ಸಿ.ಎನ್ ರಾವ್ ಅವರು ಶಮ್ಮಿ ಕಪೂರ್ ಅವರ ಪ್ರಸಿದ್ಧ ಹಾಡುಗಳಿಗೆ ಹೆಜ್ಜೆ ಹಾಕಿ ಎಲ್ಲರ ಮನ ರಂಜಿಸಿದರು.
ಆಶ್ರಯದ ಕಾರ್ಯಾಧ್ಯಕ್ಷ ರಾಜಾರಾಮ್ ಆಚಾರ್ಯ, ಸಂಘದ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಜೊತೆ ಕಾರ್ಯದರ್ಶಿ ಪ್ರಶಾಂತ್ ಹೆರ್ಲೆ, ಗೋಕುಲ ಕಲಾವೃಂದದ ಕಾರ್ಯಾಧ್ಯಕ್ಷೆ ವಿನೋದಿನಿ ರಾವ್ ವೇದಿಕೆಯಲ್ಲಿ ದ್ದು, ಆಶ್ರಯದಲ್ಲಿ ವೈದ್ಯಕೀಯ ಸೇವೆ ಕೊಡುತ್ತಿರುವ ಮೂವರು ವೈದ್ಯರಿಗೆ ಹಾಗೂ ದಿನಾ ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವ ಕೆ.ಸುವರ್ಣ ಹಾಗೂ ಗಿರೀಶ್ ರಾವ್ ಅವರನ್ನು ಮತ್ತು ಆಶ್ರಯದಲ್ಲಿ ಸ್ವಯಂಸೇವಕರಾಗಿ ಸೇವೆಸಲ್ಲಿಸುತ್ತಿರುವ ರಾಮಮೂರ್ತಿ ಭಟ್, ಇರಿನ್ ಅತ್ತಾವರ ಅವರನ್ನು ಸನ್ಮಾನಿಸಲಾ ಯಿತು. ನಡೆಸಿದ ಆಟೋಟ ಮತ್ತಿತರ ಚಟುವಟಿಕೆಗಳಲ್ಲಿ ಹೆಚ್ಚಿನ ಅಂಕಗಳಿಸಿದ ನಿರ್ಮಲೆಂದು ಚಾಮಾಕ್ ಅವರಿಗೆ ಆಶ್ರಯ ಸ್ಟಾರ್' ಬಿರುದು ಪ್ರದಾನಿಸಿ ಹಾಗೂ ಮಹಿಳಾ ವಿಭಾಗದ ನವೀನ್ಯರಿಗೆ
ಸ್ಟಾರ್ ಟ್ರೋಫಿ’ ನೀಡಿ ಗೌರವಿಸಿದರು.
ವಾಮನ ಹೊಳ್ಳ ಮಾತನಾಡಿ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಆಶ್ರಯದ ಕಾರ್ಯ ಚಟುವಟಿಕೆಗಳ ಬಗ್ಗೆ ಸ್ಥೂಲವಾಗಿ ಪ್ರೇಕ್ಷಕರಿಗೆ ವಿವರಣೆ ನೀಡಿದರು. ಆಶ್ರಯದ ಕಾರ್ಯಾಧ್ಯಕ್ಷೆ ಚಂದ್ರಾವತಿ ರಾವ್ ಆಶ್ರಯದ ವರದಿ ವಾಚಿಸಿದರು.
ಬಿಎಸ್‌ಕೆಬಿಎ ಜೊತೆ ಕಾರ್ಯದರ್ಶಿ ಚಿತ್ರ ಮೇಲ್ಮನೆ, ಮಹಿಳಾ ವಿಭಾಗಧ್ಯಕ್ಷೆ ಸಹನಾ ಪೋತಿ, ಗೋಕುಲ ಕಲಾವೃಂದ ಸಮಿತಿಯ ವಿನೋದಿನಿ, ಯುವ ವಿಭಾಗದ ದೀಪಕ್ ಶಿವತಾಯ, ಆಹಾರ ಸಮಿತಿಯ ಗುರುರಾಜ್ ಭಟ್ ಮತ್ತು ಕೃಷ್ಣ ಮಂಜರಬೆಟ್ಟು ಮತ್ತಿತರರು ಉಪಸ್ಥಿತರಿದ್ದು ಆಶ್ರಯದ ನಿವಾಸಿ ಎಸ್. ಆನಂದ ಪ್ರಾರ್ಥನೆಯನ್ನಾಡಿದರು. ರಾಜಾರಾಮ ಆಚಾರ್ಯ ಸ್ವಾಗತಿಸಿದರು. ಕು| ನವ್ಯ ಉದಯಶಂಕರ್ ಹಾಗೂ ಅನಿಶ್ ಶಿವತ್ತಾಯ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಹೆರ್ಲೆ ಧನ್ಯವಾದ ಸಮರ್ಪಿಸಿದರು.