ನಾರಾಯಣ ನಂದಳಿಕೆ ಇವರನ್ನು ಗೌರವಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಮುಂಬಯಿ : ಮಂಗಳೂರು ಇಲ್ಲಿ ನಮ್ಮ ಕುಡ್ಲ ಟಿವಿ ಚಾನೆಲ್‌ನ ಸ್ಟುಡಿಯೋದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ದಾಖಲಿಕರಣ ಗೊಳ್ಳುತ್ತಿರುವ “ಬರವುದ ಬಿರ್ಸೆ” ಕಾರ್ಯಕ್ರಮದ ಶೂಟಿಂಗ್ ಮಧ್ಯಾಂತರದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಜಿ.ಕತ್ತಲ್‌ಸಾರ್ ಹಾಗೂ ಡಾ| ಆಕಾಶ್ ರಾಜ್ ಅವರು ಮುಂಬಯಿಯಲ್ಲಿನ ಹೆಸರಾಂತ ರಂಗಕರ್ಮಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಾಟಕಕಾರ ನಂದಳಿಕೆ ನಾರಾಯಣ ಶೆಟ್ಟಿ ಇವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಿದರು.