Published On: Mon, Oct 10th, 2022

ಸಾಂತಾಕ್ರೂಜ್ : ಪೇಜಾವರ ಮಠದಲ್ಲಿನ ಶ್ರೀ ಸತ್ಯನಾರಾಯಣ ಪೂಜೆ ಪ್ರಯತ್ನಗಳ ಈಡೇರಿಕೆಗೆ ಭಗವಂತನ ಕೃಪೆ ಮುಖ್ಯ : ಪೇಜಾವರ ವಿಶ್ವಪ್ರಸನ್ನಶ್ರೀ

ಮುಂಬಯಿ: ನಮ್ಮೆಲ್ಲರ ಬದುಕಿನಲ್ಲಿ ನಿತ್ಯ ಸುಖ ಸಂತೋಷ ಇರಲಿ ಎಂದು ಬಯಸುತ್ತೇವೆ. ಅದಕ್ಕೋಸ್ಕರವೇ ಹಲಿರುಳು ದುಡಿಯುತ್ತಿರುತ್ತೇವೆ. ನಮ್ಮೆಲ್ಲಾ ಪ್ರಯತ್ನಕ್ಕೆ ಭಗವಂತ ಅನುಗ್ರಹಿಸಿದ ಅಂತಾದ್ರೆ ಮಾತ್ರ ನಮ್ಮ ಪ್ರತಿಯೊಂದು ಪ್ರಾರ್ಥನೆಗಳು ಈಡೇರುತ್ತವೆ. ಹಕ್ಕಿಗೆ ಎರಡು ರೆಕ್ಕೆ ಹೇಗೆ ಬೇಕೋ ಮತ್ತು ಎರಡು ರೆಕ್ಕೆಗಳಿದ್ದಾಗ ಮಾತ್ರ ಹಕ್ಕಿ ಸ್ವತಂತ್ರ‍್ಯವಾಗಿ ಹಾರುವಂತೆ ನಮ್ಮ ಬದುಕೂ ಎಣಿಸಿದಂತೆ ಸಾಗಬೇಕು ಅಂತಿದ್ದರೆ ನಮ್ಮ ಪ್ರಯತ್ನದ ಜೊತೆಗೆ ಭಗವಂತನ ಅನುಗ್ರಹ ಬೇಕು. ಅಂತೆಯೇ ನಮ್ಮ ಪ್ರಯತ್ನ ಎಷ್ಟು ಮುಖ್ಯವೋ ಭಗವಂತನ ಕೃಪೆಯೂ ಅಷ್ಟೇ ಮುಖ್ಯ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಇಂದಿಲ್ಲಿ ಸಾಂತಾಕ್ರೂಜ್ ಪೂರ್ವದಲ್ಲಿನ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಭಾನುವಾರ ಗಾಣಿಗ ಸಮಾಜ ಮುಂಬಯಿ ನೆರವೇರಿಸಿದ್ದ ಶ್ರೀ ಸತ್ಯನಾರಾಯಣ ಮಹಾಪೂಜೆಯಲ್ಲಿ ಪಾಲ್ಗೊಂಡು ಪೇಜಾವರಶ್ರೀ ನೆರೆದ ಗಾಣಿಗ ಬಂಧು, ಭಕ್ತರನ್ನುದ್ದೇಶಿಸಿ ಮಾತನಾಡಿ ಇವತ್ತು ಪೇಜಾವರ ಮಠದಲ್ಲಿ ಸಮಾಜದ ಹಿತಸಾಧನೆಗೊಸ್ಕರ ಧಾರ್ಮಿಕವಾಗಿ ಸತ್ಯನಾರಾಯಣ ದೇವರ ಪೂಜೆಯನ್ನು ನಡೆಸಿದ್ದಿರಿ. ಬದುಕಿನಲ್ಲಿ ಬರಬಹುದಾದ ಏನೇ ಅಪತ್ತು, ಸಂಕಷ್ಟಗಳಿದ್ದರೂ ಕೂಡಾ ಶ್ರೀದೇವರು ಅದನ್ನೆಲ್ಲಾ ದೂರ ಮಾಡಿಕೊಟ್ಟು ನಿತ್ಯ ಸುಖ, ಸಂತೋಷ, ಸಮೃದ್ಧಿಯನ್ನು ಶ್ರೀಹರಿ ಕರುಣಿಸಲಿ ಅಂತ ಈ ಪೂಜಾಸವ ಕಾಲದಲ್ಲಿ ದೇವರಲ್ಲಿ ಪ್ರಾರ್ಥಿಸುವೆ. ನಿಮ್ಮೆಲ್ಲಾ ಪ್ರಯತ್ನಕ್ಕೆ ಕೃಷ್ಣದೇವರ ಅನುಗ್ರಹದ ಶ್ರೀರಕ್ಷೆ ನಿರಂತರವಾಗಿದ್ದು ಎಲ್ಲರಿಗೂ ಒಳಿತಾಗಲಿ ಎಂದು ಹರಸಿದರು.

ಈ ಸಂದರ್ಭದಲ್ಲಿ ಗಾಣಿಗ ಸಮಾಜ ಮುಂಬಯಿ ಇದರ ಅಧ್ಯಕ್ಷ ಬಿ.ವಿ ರಾವ್ ಮತ್ತು ಉಷಾ ವಿ.ರಾವ್ ದಂಪತಿ, ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್.ಶೆಟ್ಟಿ ಪಣಕಜೆ ಮತ್ತು ಮಾಳ ರಾಘವೇಂದ್ರ ಭಟ್ ಶ್ರೀಗಳವರನ್ನು ಫಲಪುಷ್ಪಗಳನ್ನಿತ್ತು ಸಾಂಪ್ರದಾಯಿಕವಾಗಿ ಗೌರವಿಸಿದರು. ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ವಿದ್ವಾನ್ ಹರಿ ಭಟ್ ಪುತ್ತಿಗೆ, ವೇದಘೋಷಗಳೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಗೌರವಾಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಉಪಾಧ್ಯಕ್ಷರುಗ ಳಾದ ಭಾಸ್ಕರ ಎಂ.ಗಾಣಿಗ ಮತ್ತು ವಿಜಯೇಂದ್ರ ಗಾಣಿಗ, ಗೌರವ ಕಾರ್ಯದರ್ಶಿ ಚಂದ್ರಶೇಖರ್ ಆರ್. ಗಾಣಿಗ, ಜೊತೆ ಕಾರ್ಯದರ್ಶಿ ಜಗದೀಶ್ ಗಾಣಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಾರಾ ಎನ್. ಭಟ್ಕಳ್, ಯುವ ವಿಭಾಗಧ್ಯಕ್ಷ ಗಣೇಶ್ ಆರ್.ಕುತ್ಪಾಡಿ, ಸದಾನಂದ ಕಲ್ಯಾಣ್ಪುರ, ಯು.ಬಾಲಚಂದ್ರ ಕಟಪಾಡಿ, ಸುಗುಣಾ ರಾಮಚಂದ್ರ ಕುತ್ಪಾಡಿ, ಲಕ್ಷ್ಮೀನಾರಾಯಣ ಕಟಪಾಡಿ, ರಾಜೇಶ್ ಆರ್.ಕುತ್ಪಾಡಿ, ದೇವೇಂದ್ರ ರಾವ್, ಪದ್ಮನಾಭ ಎನ್.ಗಾಣಿಗ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್, ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಡಾ| ಎಂ.ಸೀತರಾಮ ಆಳ್ವ, ವಿಷ್ಣು ಆಚಾರ್ಯ ಉಡುಪಿ, ಕೃಷ್ಣ ಭಟ್, ನಿರಂಜನ್ ಗೋಗ್ಟೆ, ಶ್ರೀನಿವಾಸ್ ಭಟ್ ಪರೇಲ್, ರಮೇಶ್ ಭಟ್, ಪವನ್ ಅಣ್ಣಿಗೇರಿ, ಮುಕುಂದ್ ಬೈತಮಂಗಲ್‌ಕರ್, ವಿಷ್ಣುತೀರ್ಥ ಸಾಲಿ ಸೇರಿದಂತೆ ಪುರೋಹಿತ ಹಾಗೂ ಶಿಷ್ಯವೃಂದ ಉಪಸ್ಥಿತರಿದ್ದು ಶ್ರೀಪಾದರು ನೆರೆದ ಸದ್ಭಕ್ತರಿಗೆ ಮಂತ್ರಾಕ್ಷತೆ, ಫಲಪುಷ್ಪಗಳನ್ನಿತ್ತು ಹರಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter