ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿ ಪ್ರಯುಕ್ತ ಜಗನ್ಮಾತೆಗೆ ವಿಶೇಷ ಆರಾಧನೆ
ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಜಗನ್ಮಾತೆಯ ವಿಶೇಷ ಆರಾಧನೆಯನ್ನು ಅ.05ರಂದು ಬುಧವಾರ ವಿಜಯದಶಮಿಯಂದು ಹಲವಾರು ಕಾರ್ಯಕ್ರಮದೊಂದಿಗೆ ಆಚರಿಸಲಾಗುವುದು.
ಕಾರ್ಯಕ್ರಮಗಳು: ಬೆಳಗ್ಗೆ 7.00 – 8,00 : ಶ್ರೀ ಎಂ. ಎಸ್. ಗಿರಿಧರ್ ಮತ್ತು ಶ್ರೀಮತಿ ವಸುಧಾ ಗಿರಿಧರ್‌ರವರಿಂದ ಭಗವನ್ನಾಮ ಸಂಕೀರ್ತನೆ, 7.30ರಿಂದ 9.30 ದುರ್ಗಾ ಹೋಮ, 11ರಿಂದ 12ರವರೆಗೆ ನವದುರ್ಗೆಯರಿಗೆ ಕುಮಾರಿ ಪೂಜೆ, 11.30-12.30 ಸಿತಾರ್ ರತ್ನ ಕೋಚಿಕಾರ್ ದೇವದಾಸ್ ಪೈ ಇವರಿಂದ ಸಿತಾರ್ ವಾದನ, 12.30ಕ್ಕೆ ಆರತಿ, ಮಧ್ಯಾಹ್ನ 1.00 ಅನ್ನ ಪ್ರಸಾದ ನಡೆಯಲಿರುವುದು,
ಸೆ.26ರಿಂದ ಅ.04ರವರೆಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಜಿಲ್ಲೆಯ ವಿವಿಧ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ. ಪ್ರತಿನಿತ್ಯ 11ರಿಂದ 12.30ರ ವರೆಗೆ ನವದುರ್ಗೆಯ ಒಂದೊAದು ರೂಪಕ್ಕೆ ಕುಮಾರಿಪೂಜೆ ಹಾಗೂ ಚಂಡಿಪಾರಾಯಣ ನಡೆಯಲಿರುವುದು