Published On: Thu, Sep 22nd, 2022

ಸದಾ ಬರಿದಾಗಿರುವ ಗುರುಪುರ ಕೈಕಂಬದ ಎಟಿಂಎಂ

ಕೈಕಂಬ: ಅಭಿವೃದ್ಧಿ ಹೊಂದುತ್ತಿರುವ ಗುರುಪುರ ಕೈಕಂಬದಲ್ಲಿರುವ ಮೂರು ಎಟಿಎಂಗಳ ಪೈಕಿ ಎರಡು ಬಹುತೇಕ ದಿನಗಳಲ್ಲಿ ಖಾಲಿಯಾಗಿರುತ್ತವೆ. ಇದರಿಂದ ಇಲ್ಲಿಗೆ ಆಗಮಿಸುವ ಮೂಡಬಿದ್ರೆ, ಪೊಳಲಿ, ಬಿ.ಸಿ. ರೋಡ್, ಕೈಕಂಬ, ಬಜ್ಪೆ ಮೊದಲಾದ ಕಡೆಯ ಪ್ರಯಾಣಿಕರು ಹಾಗೂ ಇತರರಿಗೆ ಹಣದ ಸಮಸ್ಯೆ ಎದುರಾಗುತ್ತಿದೆ ಎಂಬ ದೂರೊಂದು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಕೈಕಂಬ ಪೋಂಪೈ ದ್ವಾರದ ಬಳಿ ಇರುವ ಎಸ್‌ಬಿಐನ ಎಟಿಎಂ ಯಥಾವತ್ತಾಗಿ ಕೆಲಸ ಮಾಡುತ್ತಿದ್ದು, ಅಲ್ಲಿ ದಿನದ ಹೆಚ್ಚಿನ ಅವಧಿಯಲ್ಲಿ ಹಣ ಪಡೆಯುವವರು ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಉಳಿದಂತೆ ಎಕ್ಸಿಸ್ ಮತ್ತು ಕೆನರಾ(ಸಿಂಡಿಕೇಟ್) ಬ್ಯಾಂಕ್‌ಗೆ ಸಂಬಂಧಿಸಿದ ಎಟಿಎಂಗಳಲ್ಲಿ ನಿರಂತರ ಹಣವಿಲ್ಲದೆ ಜನರು ಅಲ್ಲಿಂದಿಲ್ಲಿಗೆ ಅಲೆದಾಡುವಂತಾಗಿದೆ.

ಕೆಲವೊಮ್ಮೆ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹಣವಿದ್ದರೂ ಅದು ೨,೦೦೦ ರೂ ಕರೆನ್ಸಿ ನೋಟಾಗಿರುತ್ತದೆ. ಕಾರಣ, ಜನರು ಮತ್ತೊಂದು ಎಟಿಎಂಗೆ ಹೋಗುತ್ತಾರೆ. ಅಲ್ಲಿ ಹಣವಿರುವುದಿಲ್ಲ. ಎಸ್‌ಬಿಐ ಎಟಿಎಂನಲ್ಲಿ ಜನರು ತುಂಬಿರುತ್ತಾರೆ. ಹೀಗಾಗಿ ಜನರು ಹಣಕ್ಕಾಗಿ ಗುರುಪುರ ಅಥವಾ ಇತರ ಕಡೆಯ ಎಟಿಎಂಗಳಿಗೆ ಹೋಗುತ್ತಾರೆ. ಒಟ್ಟರ್ಥದಲ್ಲಿ, ಗುರುಪುರ ಕೈಕಂಬದಲ್ಲಿರುವ ಎಟಿಎಂಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಕೈಕಂಬದ ಜನರು ಹೇಳುವಂತಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter