ಡಾ .ತುಂಗಾ ಅವರ ಕನಸಿನ ಮನಸ್ವಿನಿ ಹಾಸ್ಪಿಟಲ್ ಅರ್ಕುಳದಲ್ಲಿ ವಿನೂತನ ಕಾರ್ಯಕ್ರಮ
ಕೈಕಂಬ: ರೋಟರಿ ಕ್ಲಬ್ ಮಂಗಳೂರು ಸನ್ ರೈಸ್ , ರೋಟರಿ ಕ್ಲಬ್ ಬಂಟ್ವಾಳ ಟೌನ್ , ರೋಟರಿ ಕ್ಲಬ್ ಫರಂಗಿಪೇಟೆ ವತಿಯಿಂದ ಜಿಲ್ಲಾ ಯೋಜನೆಯಾದ ವನಸಿರಿ ಕಾರ್ಯಕ್ರಮವನ್ನು ಡಾ.ತುಂಗಾಸ್ ಮನಸ್ವಿನಿ ಹಾಸ್ಪಿಟಲ್ ಅರ್ಕುಳದಲ್ಲಿ ವನಮಹೋತ್ಸವ ಕಾರ್ಯಕ್ರಮ ಸೆ.18ರಂದು ಭಾನುವಾರ ನಡೆಯಿತು.
ಜಿಲ್ಲಾ ರೋಟರಿ ಗವರ್ನರ್ ಪ್ರಕಾಶ್ ಕಾರಂತ್ ರವರು ಇತರ ಗಣ್ಯರೊಂದಿಗೆ ನಡೆಸಿಕೊಟ್ಟರು.ಇದೇ ಸಂದರ್ಭದಲ್ಲಿ. ಡಾ.ತುಂಗಾ ಅವರ ಕನಸಿನ ಮನಸ್ವಿನಿ ಆಸ್ಪತ್ರೆಯ ಲೋಗೊ ಬಿಡುಗಡೆಯನ್ನು ಡಾ. ಹಂಸರಾಜ್ ಆಳ್ವ ನೆರವೇರಿಸಿದರು.
ಈ ಸಂದರ್ಭದಲ್ಲಿ ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ, ತುಂಗಾ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಆನಂದರಾಮ ತುಂಗಾ, ಕರ್ನಾಟಕ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್, ಸಿ ಇ ಓ ಮಹಾಬಲೇಶ್ವರ ಎಂ ಎಸ್, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ರೋಟರಿ ಕ್ಲಬ್ ಮಂಗಳೂರು ಸನ್ ರೈಸ್‌ನ ಅಧ್ಯಕ್ಷ ಚೆನ್ನಗಿರಿ ಗೌಡ, ರೋಟರಿ ಕ್ಲಬ್ ಬಂಟ್ವಾಳ ಟೌನ್‌ನ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ರೋಟರಿ ಕ್ಲಬ್ ಫರಂಗಿಪೇಟೆ ಅಧ್ಯಕ್ಷ ಎ ಕೆ ಜಯರಾಮ ಶೇಕ , ಕಾರ್ಯದರ್ಶಿ ರಮೇಶ್ ಶೆಟ್ಟಿ, ಡಾ ಸತೀಶ್ ರಾವ್ ಡಾ ತುಂಗಾಸ್ ಮನಸ್ವಿನಿ ಹಾಸ್ಪಿಟಲ್ ಅರ್ಕುಳದ ಡಾ ರವೀಶ್ ತುಂಗಾ, ಡಾ ಸುಚಿತ್ರ ತುಂಗಾ, ಪ್ರೇರಣಾ ತುಂಗಾ, ಡಾ ತುಂಗಾಸ್ ಮನಸ್ವಿನಿ ಹಾಸ್ಪಿಟಲ್ ಅರ್ಕುಳ ಪ್ರಾಜೆಕ್ಟ್ ಕಮಿಟಿಯ ಉಮೇಶ್ ಶೆಟ್ಟಿ ಬರ್ಕೆ, ಅರ್ಜುನ್ ಪೂಂಜಾ, ವಿಶ್ವನಾಥ್ ತುಂಗಾ, ನಾಗರಾಜ್ ತುಂಗಾ, ಮಂಜುನಾಥ ಆಚಾರ್ಯ, ಅಸಿಸ್ಟೆಂಟ್ ಗವರ್ನರ್ ರೋಟಾರಿಯನ್ ಮೇಜರ್ ಡೋನರ್, ಹರಿರಾಜ್ ಮತ್ತಿತರರು ಉಪಸ್ಥಿತರಿದ್ದರು. ರವೀಶ್ ತುಂಗಾ ಸ್ವಾಗತಿಸಿದರು. ಅಕ್ಷತಾ ಶೆಟ್ಟಿ ನಿರೂಪಿಸಿದರು, ಸುಮಂಗಲಾ ತುಂಗ ವಂದಿಸಿದರು