ಶೇಖರ್ ಅಜೆಕಾರ್ ಗೆ ವಿಶ್ವ ಮಾಧ್ಯಮ ಚಕ್ರವರ್ತಿ ಪ್ರಶಸ್ತಿ
ಕೈಕಂಬ :ವಿಶ್ವದರ್ಶನ ಪ್ರಥಮ ಸಮ್ಮೇಳನವು ಧಾರವಾಡದ ರಂಗಾಯಣದಲ್ಲಿ ಸೆ.22 ರಂದು ನಡೆಯಲಿದ್ದು ಪತ್ರಿಕೋದ್ಯಮದ ಮೂರುದಶಕಗಳ ಹೆಚ್ಚಿನ ಕಾಲ ಸಾರ್ಥಕ ಸೇವೆಗಾಗಿ ಶೇಖರ್ ಅಜೆಕಾರ್ ಅವರಿಗೆ ವಿಶ್ವ ಮಾಧ್ಯಮ ಚಕ್ರವರ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘಟಕ, ವಿಶ್ವದರ್ಶನ ದೈನಿಕ ಸಂಪಾದಕ ಡಾ.ಎಸ್.ಎಸ್.ಪಾಟೀಲ ಪ್ರಕಟಿಸಿದ್ದಾರೆ.

ಕುಂದಪ್ರಭ ಪತ್ರಿಕೆಯ ಮೂಲಕ ವ್ರತ್ತಿ ಪತ್ರಿಕೋದ್ಯಮ ಆರಂಭಿಸಿದ ಅವರು ವಿದ್ಯಾರ್ಥಿಯಾಗಿದ್ದಾಗಲೇ ಯುವಸ್ಪಂದನ ಮುದ್ರಿತ ಪತ್ರಿಕೆ ಪ್ರಕಟಿಸುತ್ತಿದ್ದರು. ಕರ್ನಾಟಕ ಮಲ್ಲ, ಜನವಾಹಿನಿ ದೈನಿಕಗಳಲ್ಲಿ ಪೂರ್ಣಕಾಲಿಕ ಪತ್ರಕರ್ತರಾಗಿ ಪ್ರಮುಖ ಹುದ್ದೆಗಳನ್ನು ಮುಂಬಯಿ, ಬೆಂಗಳೂರು, ಮಂಗಳೂರು, ಉಡುಪಿ ಸಹಿತ ವಿವಿದೆಡೆ ಕಾರ್ಯನಿರ್ವಹಿದ್ದಾರೆ. ಬಳಿಕ ಕನ್ನಡ ಪ್ರಭ, ಉಷಾಕಿರಣ, ದೈಜಿವಲ್ರ್ಡ್ ಡಾಟ್ ಕಾಮ್ ಗಳಲ್ಲಿ ಸುದ್ದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಮಾಧ್ಯಮ ಸೇವಾರತ್ನ ರಾಜ್ಯ ಪ್ರಶಸ್ತಿ, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಪ್ರಥಮ ತುಳುವ ಮಾಧ್ಯಮ ಸಿರಿಪ್ರಶಸ್ತಿ, ಉಡುಪಿ ಜಿಲ್ಲಾಡಳಿತದ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ, ಅಖಿಲ ಭಾರತ ಅಗ್ನಿ ಶಿಖಾ ಮಂಚ್ ದಕ್ಷಿಣ ಭಾರತ ಪತ್ರಕಾರ್ ಪ್ರಶಸ್ತಿ ,ದೆಹಲಿ ಕನ್ನಡಿಗ ಪತ್ರಿಕಾ ರಾಷ್ಟ್ರೀಯ ಗೌರವ, ಮುಂಬಯಿ ಮಯೂರ ವರ್ಮ ಪ್ರತಿಷ್ಠಾನದ ಕೃಷಿಕ ಬಂಧು ಪ್ರಶಸ್ತಿ, ಗೋವಾ ಕನ್ನಡಿಗರ ಸಮಾವೇಶದಲ್ಲಿ
ಕರುನಾಡ ಪದ್ಮಶ್ರೀ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನ ಗೌರವ, ಬಸವಶ್ರೀ ರಾಷ್ಟ್ರೀಯ ಪುರಸ್ಕಾರ, ಭಾರತ ಜ್ಯೋತಿ ರಾಷ್ಟ್ರ ಪ್ರಶಸ್ತಿ, ವೀರ ಮದಕರಿ ನಾಯಕ ಪ್ರಶಸ್ತಿ, ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಸಹಿತ ನೂರಾರು ರಾಷ್ಥ್ರ, ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಅಜೆಕಾರಿನ ಶಂಕರ – ಗಿರಿಜಾ ದಂಪತಿಗಳ ಪುತ್ರ. ಪತ್ನಿ ಸೌಮ್ಯಶ್ರೀ ಮಗ ಸುನಿಧಿ ಅಜೆಕಾರು ಮಗಳು ಸುನಿಜ ಅಜೆಕಾರು. 115 ವರ್ಷಗಳ ಅಜೆಕಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾಭಿವ್ರದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಆದಿಗ್ರಾಮೋತ್ಸವ, ಅಂಗನವಾಡಿ ಮಕ್ಕಳ ಮೇಳ, ಕರ್ನಾಟಕ ಯುವ ಸಮ್ಮೇಳನ, ಕರ್ನಾಟಕ ಮಕ್ಕಳ ಸಮ್ಮೇಳನ, ಕರ್ನಾಟಕ ಮಿನಿ ಚಲನಚಿತ್ರೋತ್ಸವ,ಹಡಗಿನಲ್ಲಿ ಸಾಹಿತ್ಯದ ಮೆರವಣಿಗೆ ಸಹಿತ ಹತ್ತಾರು ಹೊಸ ಯೋಚನೆಯ ವಿನೂತನ ಕಾರ್ಯಕ್ರಮಗಳ ಸಂಘಟಕ. ಮುಂಬಯಿಯ ವಿಶ್ವವಿದ್ಯಾಲಯದಿಂದ ವರದರಾಜ ಆದ್ಯ ಚಿನ್ನದ ಪದಕದೊಂದಿಗೆ ಎಂ.ಎ ಪದವಿಯನ್ನು ಮುಂಬಯಿ ವಿಶ್ವ ವಿದ್ಯಾಲಯದಿಂದ ಪಡೆದ ಅಜೆಕಾರು ಅವರ ಸಾಧನೆಗೆ ಮತ್ತೊಂದು ಗರಿ ಇದಾಗಿದೆ.