ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆರ್ ಅಶೋಕ್ ಹಾರನಹಳ್ಳಿ’ ಭೇಟಿ
ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ಅನ್ನ ಛತ್ರ”ದ ನವೀಕೃತ ಕಟ್ಟಡದ ವಿಷಯದ ಬಗ್ಗೆ ಚರ್ಚೆ
ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆರ್ ಅಶೋಕ್ ಹಾರನಹಳ್ಳಿ’ ಸೆ.೧೭ರಂದು ಶನಿವಾರ ಭೇಟಿ ನೀಡಿದರು. ದೇವಾಲಯದ ವತಿಯಿಂದ ಪ್ರಧಾನ ಅರ್ಚಕ ಪವಿತ್ರಪಾಣಿ ಮಾಧವ ಭಟ್ ಪ್ರಸಾದ ನೀಡಿದರು, ಅರ್ಚಕ ನಾರಾಯಣ ಭಟ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಬ್ರಾಹ್ಮಣ ಸಮಾಜದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ “ಅನ್ನ ಛತ್ರ”ದ ನವೀಕೃತ ಕಟ್ಟಡದ ವಿಷಯದ ಬಗ್ಗೆ ಚರ್ಚಿಸಲಾಯಿತು. ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಬೆಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಡಾ| ಬಿ. ಎಸ್.ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಅದ್ಯಕ್ಷರಿಗೆ ಬ್ರಾಹ್ಮಣ ಸೇವಾ ಸಮಾಜ ಪೊಳಲಿ ಇದರ ಕಾರ್ಯ ಸೂಚಿಯ ಬಗ್ಗೆ ಜಿ. ಭಾಸ್ಕರ ಭಟ್, ಗಂಜಿಮಠ ಬ್ರಾಹ್ಮಣ ಸೇವಾ ಸಮಾಜ ಪೊಳಲಿಯ ಅಧ್ಯಕ್ಷರು ಅಗತ್ಯ ಸಲಹೆ ನೀಡಿದರು. ಸಭೆಯಲ್ಲಿ ಅತಿಥಿಗಳನ್ನು ಕರ್ಬೆಟ್ಟು ಕೃಷ್ಣ ಭಟ್ ಇವರು ಸ್ವಾಗತಿಸಿದರು.
ನೂಯಿ ಬಾಲಕೃಷ್ಣ ರಾವ್, ಧಾರ್ಮಿಕ ಪರಿಷತ್ ನ ಸದಸ್ಯರಾದ ಗಿರೀಶ್ ತಂತ್ರಿ ಪೊಳಲಿ, ಉಮೇಶ್ ಶಾಸ್ತ್ರಿ ಬೆಂಗಳೂರು, ರಮೇಶ್ ರಾವ್ ಕಲ್ಕುಟ ಕೂಟ ಮಹಜಗತು ಪೊಳಲಿ ಅಂಗಸಂಸ್ಥೆಯ ಅಧ್ಯಕ್ಷರು ವಿಶ್ವೇಶ್ವರ ಭಟ್ ಪೊಳಲಿ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಪೊಳಲಿ ಬ್ರಾಹ್ಮಣ ಸೇವಾ ಸಮಾಜದ ತುರ್ತು ಸಭೆ ನಡೆಯಿತು.