ಟೌನ್ ರೋಟರಿ ಕ್ಲಬ್ ವತಿಯಿಂದ ನಾಟಿ
ಬಂಟ್ವಾಳ: ತಾಲ್ಲೂಕಿನ ಬೊಂಡಾಲದಲ್ಲಿ ಟೌನ್ ರೋಟರಿ ಕ್ಲಬ್ ವತಿಯಿಂದ ಒಂದು ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ಸೆ.13ರಂದು ಮಂಗಳವಾರ ಶ್ರಮದಾನ ಮೂಲಕ ನೇಜಿ ನಾಟಿ ನಡೆಸಿ ಗಮನ ಸೆಳೆದರು. ಕ್ಲಬ್ ನ ಅಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ, ನಾರಾಯಣ ಪೆರ್ನೆ, ಮನೋಜ್ ಕುಲಾಲ್ ಪ್ರಗತಿಪರ ಕೃಷಿಕ ಶ್ರೀಧರ ಶೆಟ್ಟಿ ಮತ್ತಿತರರು ಇದ್ದರು.