ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ 3 ಅಶಕ್ತ ಕುಟುಂಬಗಳಿಗೆ ಸಹಾಯ ಧನ ಹಸ್ತಾಂತರ
ಬಂಟ್ವಾಳ: ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ 3 ಅಶಕ್ತ ಕುಟುಂಬಗಳಿಗೆ ಸಹಾಯ ಧನ ಹಸ್ತಾಂತರಿಸಲಾಯಿತು.
ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿರುವ ಧಾರವಾಡದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮೂಲತಃ ಕುಂದಾಪುರದವರಾದ ಉಮೇಶ್ ಶೆಟ್ಟಿಯವರ ಚಿಕಿತ್ಸೆಗೆ ರೂ. 15,000, ಸ್ತನ ಕ್ಯಾನ್ಸರ್ ಗೆ ತುತ್ತಾಗಿರುವ ಬಂಟ್ವಾಳ ತಾಲೂಕು ತುಂಬೆ ರಾಮಲ್ ಕಟ್ಟೆ ಬರೆ ವಿಶ್ವನಾಥ ಪೂಜಾರಿಯವರ ಪತ್ನಿ ವೆಂಕಮ್ಮ ಇವರ ಚಿಕಿತ್ಸೆಗೆ ರೂ.15,000 ಮತ್ತು ಕಿಡ್ನಿ ವೈಫಲ್ಯ, ಲಿವರ್ ಸಮಸ್ಯೆ ಮತ್ತು ಅಂಗಾಂಗ ವೈಫಲ್ಯದಿಂದ ಅನಾರೋಗ್ಯ ಪೀಡಿತರಾದ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ನಡುವಡ್ಕ ಕೃಷ್ಣಪ್ಪ ಪೂಜಾರಿಯವರ ಪತ್ನಿ ಸುಶೀಲಾ ಇವರ ಚಿಕಿತ್ಸೆಗೆ ರೂ. 15,000 ಆರ್ಥಿಕ ಸಹಾಯವನ್ನು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ. ರೋಡ್ ಇಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.