ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಗೋಮಯ ಹಣತೆ ಸಿದ್ದ..!
ಬಂಟ್ವಾಳ: ಪ್ರಧಾನಿಯವರ ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನೇ ತರಬೇತುಗೊಳಿಸಿ ಗೋಮಯ ಹಣತೆಗಳನ್ನು ಸಿದ್ಧಗೊಳಿಸಲಾಗುತ್ತಿದ್ದು, ಈ ಬಾರಿಯ ದೀಪಾವಳಿಗೆ ಸುಮಾರು 10 ಸಾವಿರ ಹಣತೆಗಳನ್ನು ಸಿದ್ಧಗೊಳಿಸುವ ಗುರಿಯೊಂದಿಗೆ ಈಗಾಗಲೇ ಎರಡೂವರೆ ಸಾವಿರಕ್ಕೂ ಅಧಿಕ ಹಣತೆಗಳು ಸಿದ್ಧಗೊಂಡಿದೆ.
ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿಗಳು ಸ್ವಾವಲಂಬಿಗಳಾಗುವ ಜತೆಗೆ ವಿದೇಶಿ ವಸ್ತುಗಳಿಂದ ದೂರವಿರಬೇಕು ಎಂದು ಈ ಕಾರ್ಯವನ್ನು ಮಾಡುತ್ತಿದ್ದು, ವಿದ್ಯಾಸಂಸ್ಥೆಯ ವಸುಧಾರಾ ಗೋಶಾಲೆಯಲ್ಲಿರುವ ದೇಶೀಯ ಗೋವುಗಳ ಸೆಗಣಿ ಹಾಗೂ ಗೋಮಯವನ್ನು ಬಳಸಿಕೊಂಡೇ ಈ ಹಣತೆಗಳನ್ನು ಸಿದ್ಧಗೊಳಿಸಲಾಗುತ್ತಿದೆ.
ವಿದ್ಯಾರ್ಥಿಗಳೇ ಸೇರಿಕೊಂಡು ಹಣತೆ ಸಿದ್ಧ ಮಾಡುತ್ತಿದ್ದು, ಸೆಗಣಿಯನ್ನು ಬೇಕಾದಷ್ಟು ಪಾಕ ಭರಿಸಿ, ಅಚ್ಚಿಯಲ್ಲಿ ಒತ್ತಿ ಬಳಿಕ ಬಿಸಿಲಿನಲ್ಲಿ ಇಡಲಾಗುತ್ತದೆ. ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಅವರು ಈ ಕಾರ್ಯದ ಸಂಚಾಲಕರಾಗಿದ್ದು, ಜತೆಗೆ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು ಸಾಥ್ ನೀಡುತ್ತಿದ್ದಾರೆ.

ಹಣತೆ ಉರಿದರೂ ಉತ್ತಮ:
ವಿದ್ಯಾಸಂಸ್ಥೆಯ ಗೋಶಾಲೆಯ 45 ಗೋವುಗಳ ಸೆಗಣಿಯಿಂದ ಹಣತೆ ತಯಾರಿ ನಡೆಯುತ್ತಿದ್ದು, ಇದರ ಜತೆಗೆ 500ರಷ್ಟು ಮಣ್ಣಿನ ಹಣತೆಯನ್ನೂ ತಯಾರಿಸಲಾಗಿದೆ. ಗೋಮಯ ಹಣತೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಉರಿಸಬೇಕಿದ್ದು, ಸುಮಾರು ಅರ್ಧ/ಮುಕ್ಕಾಲು ಗಂಟೆಗಳ ಕಾಲ ಉರಿಯಲಿದೆ. ಬಳಿಕ ಒಟ್ಟು ಹಣತೆಯೇ ಉರಿದರೂ ಯಾವುದೇ ತೊಂದರೆ ಇರುವುದಿಲ್ಲ ಎಂದು ಸಂಘಟಕರು ಹೇಳುತ್ತಾರೆ.
ದೀಪಾವಳಿವರೆಗೆ ತಯಾರಿಯ ಯೋಚನೆ:
ಪ್ರಧಾನಿಯವರ ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ವಿದ್ಯಾರ್ಥಿಗಳ ಮೂಲಕ ಗೋಮಯ ಹಣತೆಯ ತಯಾರು ಮಾಡಲಾಗುತ್ತಿದ್ದು, ದೇಶೀಯ ಹಸುವಿನ ಸೆಗಣಿಯನ್ನೇ ಬಳಸಿ ಹಣತೆ ತಯಾರಿಸಲಾಗುತ್ತದೆ. ನ.4ಕ್ಕೆ ಈ ಕಾರ್ಯ ಆರಂಭಿಸಲಾಗಿದ್ದು, ದೀಪಾವಳಿ ಪ್ರಾರಂಭದವರೆಗೂ ಮುಂದುವರಿಸುವ ಯೋಚನೆ ಇದೆ. ಒಟ್ಟು 10 ಸಾವಿರ ಹಣತೆಗಳನ್ನು ತಯಾರಿಸುವ ಗುರಿ ಹೊಂದಲಾಗಿದ್ದು, ದಿನಕ್ಕೆ 2 ಬ್ಯಾಚ್‌ಗಳ ಮೂಲಕ ತಯಾರಿ ಕಾರ್ಯ ನಡೆಯುತ್ತಿದೆ ಎಂದು ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ತಿಳಿಸಿದ್ದಾರೆ.