ಪಡುಪೆರಾರ-ಗಂಜಿಮಠ ಬಿಲ್ಲವ ಸಮಾಜ, ಸೇವಾ ಸಂಘ(ರಿ) ವತಿಯಿಂದ ಗುರು ಜಯಂತಿ
ಕೈಕಂಬ : ಪಡುಪೆರಾರ-ಗಂಜಿಮಠ ವ್ಯಾಪ್ತಿಯ ನೂತನ ಬಿಲ್ಲವ ಸಮಾಜ ಸೇವಾ ಸಂಘ(ರಿ) ಇದರ ವತಿಯಿಂದ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಸೆ. ೧೧ರಂದು ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಗಣ ಗುರುಗಳ ೧೬೮ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ಹಾಗೂ ಸಂಘದ ಗೌರವಾಧ್ಯಕ್ಷ ಕೃಷ್ಣ ಅಮೀನ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಗುರುಗಳ ಭಾವಚಿತ್ರಕ್ಕೆ ಸುಂಕದಕಟ್ಟೆ ಕ್ಷೇತ್ರದ ಸಂಚಾಲಕ ನಾರಾಯಣ ಪೂಜಾರಿ ಹಾಗೂ ಇತರರು ಪುಷ್ಪಾರ್ಚನೆ ಮಾಡಿದರು. ಗೆಜ್ಜೆಗಿರಿ ಕ್ಷೇತ್ರದ ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಹರ್ಷ ಕುಮಾರ್, ತನ್ಯಗುತ್ತಿನ
ಗುರಿಕಾರ ಮೋನಪ್ಪ ಪೂಜಾರಿ, ಗೀತಾ, ಶ್ರೀಲತಾ, ಕಬೆತ್ತಿಗುತ್ತಿನ ಕಿಶೋರ್ ಪೂಜಾರಿ ಸಂಘಕ್ಕೆ ಶುಭ ಕೋರಿದರು. ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಸುನಿಲ್ ಪೂಜಾರಿ ಗಂಜಿಮಠ ಅವರು ಸ್ವಾಗತಿಸಿದರೆ, ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪದ್ಮನಾಭ ಪೂಜಾರಿ ನೀರಳಿಕೆ, ನಾಗೇಶ್ ಕೋಟ್ಯಾನ್, ರಾಜೇಶ್, ಲಕ್ಷ್ಮೀಶ್ ಪೂಜಾರಿ, ಸದಾಶಿವ ಪೂಜಾರಿ, ಶಶಿಕುಮಾರ್, ಕೃಷ್ಣ ಪೂಜಾರಿ, ಪ್ರದೀಪ್ ಪೂಜಾರಿ, ನವೀನ್ ಪೂಜಾರಿ, ಸುಧಾಕರ, ಮೋಹನ ಪೂಜಾರಿ, ಜಗದೀಶ ಪೂಜಾರಿ, ಕಿರಣ್, ಹರೀಶ್, ನವೀನ್, ಧನರಾಜ್, ಗಂಗಾಧರ ಅಳಿಕೆ, ಗೋಪಾಲ ಪೂಜಾರಿ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಾಗಬ್ರಹ್ಮ ಭಜನಾ ಮಂಡಳಿಯ ಸದಸ್ಯರಿಂದ ಕುಣಿತ ಭಜನರೆ ಪ್ರದರ್ಶನಗೊಂಡಿತು.