ಡಿ.ಇ.ಎಲ್.ಇಡಿ ಪರೀಕ್ಷೆಯಲ್ಲಿ ರೋಸಾಮಿಸ್ತಿಕಾ ವಿದ್ಯಾರ್ಥಿ ಶಿಕ್ಷಕಿಯರ ಮೇಲುಗೈ
ಕೈಕಂಬ: ಮಂಗಳೂರು ಬೆಥನಿ ಇದರ ಆಡಳಿತ ಮಂಡಳಿಗೆ ಒಳಪಟ್ಟ ರೋಸಾಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯ ೨೦೨೧-೨೦೨೨ನೇ ಸಾಲಿನ ಡಿ.ಇ.ಎಲ್.ಇಡಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿ ಶಿಕ್ಷಕಿಯರು ಶೇಕಡಾ ನೋರಕ್ಕೆ ಫಲಿತಾಂಶದೊಂದಿಗೆ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.