ಎಸ್.ವಿ.ಎಸ್‌ಇಂಗ್ಲೀಷ್ ಸ್ಕೂಲ್ ವಿದ್ಯಾಗಿರಿ ಬಂಟ್ವಾಳ: ಚೆಸ್ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಬಂಟ್ವಾಳ: ಎಸ್.ವಿ.ಎಸ್‌ಸ್ಕೂಲ್, ವಿದ್ಯಾಗಿರಿ ಬಂಟ್ವಾಳ ಇಲ್ಲಿನ೧೭ ವರ್ಷದೊಳಗಿನ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ೧೦ನೇ ತರಗತಿ ವಿದ್ಯಾರ್ಥಿನಿ ಮಹಿಮಾಜೆ., ಹಾಗೂ ೧೪ ವರ್ಷದೊಳಗಿನ ವಯೋಮಿತಿ ಬಾಲಕರ ವಿಭಾಗದಲ್ಲಿ ೮ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ಎ. ಬಿ. ಮತ್ತು ಬಾಲಕಿಯರ ವಿಭಾಗದಲ್ಲಿ ೦೭ನೇ ತರಗತಿ ವಿದ್ಯಾರ್ಥಿನಿ ಅನನ್ಯ ಪಿ. ಭಟ್‌ಇವರು ಸರಕಾರಿ ಪ್ರೌಢಶಾಲೆ,ಪೂಳಲಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.



ಇವರಿಗೆ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ (ರಿ)ದಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ,ಉಪಾಧ್ಯಕ್ಷೆ ವತ್ಸಲ ಕಾಮತ್, ಕಾರ‍್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ, ಅನಿರುದ್ಧ ಕಾಮತ್, ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ ಹಾಗೂ ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗದವರುಅಭಿನಂದನೆ ಸಲ್ಲಿಸಿದ್ದಾರೆ.