ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್: ‘ವಿಜ್ಞಾನ ವರ್ಕಿಂಗ್ ಮೊಡಲ್ ಸ್ಪರ್ಧೆ’ಯಲ್ಲಿ ತೃತೀಯ ಸ್ಥಾನ
ಬಂಟ್ವಾಳ: ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್, ವಿದ್ಯಾಗಿರಿ ಬಂಟ್ವಾಳ ಇಲ್ಲಿನ ೧೦ನೇ ತರಗತಿಯ ವಿದ್ಯಾರ್ಥಿಗಳಾದ ಆರೋನ್ ಡಿ’ಸೋಜ ಮತ್ತುಚಿರಂತನ್ ಜಿ.ಎನ್. ರವರು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್ ಇ ಮತ್ತು ಐಸಿಎಸ್‌ಸಿ ಶಾಲೆಗಳಿಗೆ ಸೈಂಟ್ ಆಲೋಶಿಯಸ್ ಗೋಝಾಂಗ ಶಾಲೆ, ಮಂಗಳೂರು ಇವರ ‘ಡೆಸಿನಿಯಲ್ ಸೆಲೆಬ್ರೇಷನ್‘ನ ಪ್ರಯುಕ್ತ ನಡೆಸಿದ “ಸೃಜನ” ಅಂತರ್ ಶಾಲಾಮಟ್ಟದ ‘ವಿಜ್ಞಾನ ವರ್ಕಿಂಗ್ ಮೊಡಲ್ ಸ್ಪರ್ಧೆ’ಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.

ಇವರಿಗೆ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ (ರಿ)ದ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ,ಉಪಾಧ್ಯಕ್ಷೆ ವತ್ಸಲ ಕಾಮತ್, ಕಾರ‍್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ, ಅನಿರುದ್ಧ ಕಾಮತ್, ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ ಹಾಗೂ ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

