ಮರ ಬಿದ್ದು ರಸ್ತೆ ಸಂಚಾರ ಸ್ಥಗಿತ
ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಪಂಚಾಯತ್ ವ್ಯಾಪ್ತಿಯ ಬಡಕಬೈಲುವಿನಿಂದ ಅಮ್ಮುಂಜೆಗೆ ಹೋಗುವ ರಸ್ತೆಯಲ್ಲಿ ಆ.24ರಂದು ಬುಧವಾರ ಬೆಳಿಗ್ಗೆ ಬೃಹತ್ ಮರವೊಂದು ಬಿದ್ದು, ವಿದ್ಯುತ್ ಕಂಬಗಳು ತುಂಡಾಗಿ, ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಮರ ಬಿದ್ದು ಮೂರು ವಿದ್ಯುತ್ ಕಂಬಗಳ ಮುರಿದಿವೆ. ಪರಿಣಾಮ ಅಮ್ಮುಂಜೆ ಹಾಗೂ ಸುತ್ತಲ ಪ್ರದೇಶದಲ್ಲಿ ಬೆಳಿಗ್ಗಿನಿಂದಲೇ ವಿದ್ಯುತ್ ಕೈಕೊಟ್ಟಿದ್ದರೆ, ವಾಹನ ಸಂಚಾರ ಸ್ಥಗಿತಗೊಂಡಿದೆ. ಘಟನಾ ಸ್ಥಳದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಸ್ಥಳೀಯರು ಬಿದ್ದ ಮರ ತೆರವುಗೊಳಿಸಿ, ಹೊಸ ಕಂಬಗಳ ಅಳವಡಿಕೆ ಮೂಲಕ ವಿದ್ಯುತ್ ಯಥಾಸ್ಥಿತಿಗೆ ತರಲು ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಮಧ್ಯಾಹ್ನದ ಬಳಿಕ ವಿದ್ಯುತ್ ಬಂದಿದೆ.