102.5 ಕೋಟಿ ರೂ.ವೆಚ್ಚದಲ್ಲಿ 56 ಗ್ರಾಮಗಳ 253 ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್
ಪೊಳಲಿ: ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಿಂದ ಬಂಟ್ವಾಳ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಲಿರುವ 102.5 ಕೋಟಿ ರೂ.ವೆಚ್ಚದಲ್ಲಿ 56 ಗ್ರಾಮಗಳ 253 ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಉಪಸ್ಥಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ಪೊಳಲಿಯಲ್ಲಿ ಚಾಲನೆ ನೀಡಿದರು.


ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ದೇವಿಯ ಪೂಜೆಯ ಬಳಿಕ ಪ್ರಾರ್ಥನೆ ಸಲ್ಲಿಸಿ, ನಂತರ 40 ಲ.ರೂ.ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಹಿಂಬದಿ ಚರಂಡಿ ನಿರ್ಮಾಣ,10 ಲ.ರೂ.ವೆಚ್ಚದಲ್ಲಿ ಶ್ರೀ ರಾಮಕೃಷ್ಣ ತಪೋವನ ಸಂಪರ್ಕ ರಸ್ತೆ ಹಾಗೂ ಗ್ರಾಮೀಣಾಭಿವೃದ್ದಿ ಇಲಾಖೆಯ 28 ಕೋ.ರೂ.ಗಳಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.



ಅಭೂತಪೂರ್ವವಾದ ಅಭಿವೃದ್ದಿ ಕೆಲಸ:
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಆಗದಂತ ಅಭಿವೃದ್ಧಿ ಕೆಲಸಗಳು, ಶಾಸಕ ರಾಜೇಶ್ ನಾಯ್ಕ್ ಅವರ ಶಾಸಕತ್ವದ ನಾಲ್ಕು ವರ್ಷಗಳಲ್ಲಿ ಅಭೂತಪೂರ್ವವಾಗಿ ಅನುಷ್ಠಾನಗೊಂಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಬಂಟ್ವಾಳ ಕ್ಷೇತ್ರದಲ್ಲಿ ಮುಂದೆಯೂ ನಗರದ ಒಳಚರಂಡಿ ವ್ಯವಸ್ಥೆ, ಜೆಜೆಎಂ ಮೂಲಕ ಮನೆಮನೆಗೆ ಕುಡಿಯುವ ನೀರು, ಬಹುಗ್ರಾಮ ಯೋಜನೆಯೂ ಕಾರ್ಯಗತ ಗೊಳ್ಳಲಿದ್ದು, ಈ ಮೂಲಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿಯಾಗಲಿದೆ ಎಂದರು.
ಮುಖ್ಯಮಂತ್ರಿಗಳು ಹಾಗೂ ಅಧಿಕಾರಿಗಳ ಗಮನಸೆಳೆದು ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಯಡಿ ಸುಮಾರು 3000 ಕೋ.ರೂ.ವಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಬಂಟ್ವಾಳ ಕ್ಷೇತ್ರದಲ್ಲಿ ಸದ್ದುಗದ್ದಲವಿಲ್ಲದೆ ಕಾರ್ಯರೂಪಕ್ಕೆ ತಂದಿರುವ ಶಾಸಕ ರಾಜೇಶ್ ನಾಯ್ಕ್ ಅವರು ಜನರಿಗೆ ನೀಡಿರುವ ಆಶ್ವಾಸನೆಯನ್ನು ಈಡೇರಿಸಿರುವ ಜನನಾಯಕರಾಗಿದ್ದಾರೆ ಎಂದರು.


ಕೋವಿಡ್ ಸಂದರ್ಭದಲ್ಲಿ ಜನರ ಅಗತ್ಯತೆಗಳಿಗೆ ಸ್ಪಂದಿಸಿ ತಾಲೂಕು ಆಸ್ಪತ್ರೆ ಸಹಿತ ವಿವಿಧ ಆರೋಗ್ಯಕೇಂದ್ರವನ್ನು ಮೇಲ್ದರ್ಜೆಗೇರಿಸುವಲ್ಲಿ ಯಶಸ್ವಿಯಾಗಿರುವ ಶಾಸಕರು ಕ್ಷೇತ್ರದ ಅಭವೃದ್ದಿ ಕೆಲಸಗಳ ಗಮನಕೊಡುವುದರ ಜೊತೆಗೆ ಕಾನೂನು ಸುವ್ಯವಸ್ಶೆಯನ್ನು ಕಾಪಾಡಿಕೊಳ್ಳುವ ಮಹತ್ಕಾರ್ಯವನ್ನು ಮಾಡಿರುವುದು ಅಭಿನಂದನೀಯವಾಗಿದೆ ಎಂದು ಸಂಸದ ನಳಿನ್ ಹೇಳಿದರು.

ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ: ನಾಯ್ಕ್
ಇದೇ ವೇಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ 1400 ರಸ್ತೆ ಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಯಾವುದೇ ಯೋಜನೆ ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ಜನರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಕಾಮಗಾರಿ ಅನುಷ್ಠಾನದ ವೇಳೆ ಉತ್ತಮಗುಣಮಟ್ಟಕ್ಕಾಗಿ ಜನರ ಸಲಹೆ ಸೂಚನೆಗಳು ಅತೀ ಅಗತ್ಯ. ಯಾವುದೇ ಭಷ್ಟಾಚಾರಕ್ಕೆ ಅವಕಾಶ ನೀಡದೆ ಕಾಮಗಾರಿ ಅನುಷ್ಠಾನಗೊಳಿಸುವುದಾಗಿ ಅವರು ಈ ಸಂದರ್ಭ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ ಕೆ.ಭಟ್, ರವೀಂದ್ರ ಕಂಬಳಿ, ಕಮಲಾಕ್ಷಿ , ತುಂಗಪ್ಪ ಬಂಗೇರ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ, ಗಣೇಶ್ ಸುವರ್ಣ, ವೆಂಕಟೇಶ್ ನಾವುಡ, ಮಾಧವ ಮಾವೆ, ಯಶವಂತ ಪೂಜಾರಿ, ರಾಮದಾಸ ಬಂಟ್ವಾಳ, ಸೋಮಪ್ಪ ಕೋಟ್ಯಾನ್, ಪ್ರಭಾಕರ ಪ್ರಭು, ರತ್ನ ಕುಮಾರ್ ಚೌಟ ನಂದರಾಮ ರೈ, ಪುಷ್ಪರಾಜ್ ಚೌಟ, ಡೊಂಬಯ ಅರಳ, ರಮಾನಾಥ ರಾಯಿ, ಉದಯಕುಮಾರ್ ರಾವ್, ಚರಣ್ ಜುಮಾದಿಗುಡ್ಡೆ, ಸುದರ್ಶನ್ ಬಜ, ಅಭಿಷೇಕ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ಸಚಿನ್ ಅಡಪ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ಪ್ರಕಾಶ್ ಅಂಚನ್, ಯಶೋಧರ ಚೌಟ, ಸುಕೇಶ್ ಚೌಟ, ಕಿಶೋರ್ ಪಲ್ಲಿಪಾಡಿ, ಬಾಲಕೃಷ್ಣ ಸೆರ್ಕಳ, ಸಾಂತಪ್ಪ ಪೂಜಾರಿ, ಶರ್ಮಿತ್ ಜೈನ್, ಪ್ರೇಮನಾಥ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್, ಕಿಶೋರ್ ಶೆಟ್ಟಿ, ಮಾಧವ ಕರ್ಬೆಟ್ಟು, ಗುತ್ತಿಗೆದಾರರಾದ ಎ.ಎಚ್.ಖಾದರ್, ಧೀರಜ್ ನಾಯ್ಕ್, ಧನಂಜಯ ಶೆಟ್ಟಿ, ಯಶವಂತ ನಾಯ್ಕ್, ಸುಪ್ರೀತ್ ಆಳ್ವ, ಗಿರಿಪ್ರಕಾಶ್ ತಂತ್ರಿ, ಲೋಕೇಶ್ ಭರಣೆ, ಚಂದ್ರಾವತಿ ದೇವಾಡಿಗ, ರಂಜಿತ್ ಮೈರ, ಯಶೋಧರ್ ಪೊಳಲಿ, ದೇವಳದ ಅರ್ಚಕರಾದ ಮಾಧವ ಭಟ್ , ನಾರಾಯಣ ಭಟ್, ಪರಮೇಶ್ವರ ಭಟ್, ಕೆ. ರಾಮ್ ಭಟ್, ರಾಧಕೃಷ್ಣ ತಂತ್ರಿ ಪೊಳಲಿ, ಕಾರ್ತಿಕ್ ಬಳ್ಳಾಲ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್, ಲೋಕೋಪಯೋಗಿ ಎಇಇ ಜಯಪ್ರಕಾಶ್, ಮೊದಲಾದವರಿದ್ದರು.

ಸೆ.೨ ಕ್ಕೆ ಮೋದಿ ಮಂಗಳೂರಿಗೆ
ಸೆ.2 ರಂದು ಸಂಜೆ 4 ಗಂಟೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಅಗಮಿಸಲಿದ್ದು, ನವಂಮಗಳೂರು ಬಂದರಿನಲ್ಲಿ ನಡೆಯುವ ಸಾಗರಮಾಲ ಯೋಜನೆ ಸಹಿತ ಕೇಂದ್ರದ ವಿವಿಧ ಯೋಜನೆಯ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದು, ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಈ ಸಂದರ್ಭ ಮಾಡಿದರು.
