ಕೈಕಂಬ: ಕರೊನಾ ಮಹಾಮಾರಿಯ ಸಂದರ್ಭದಲ್ಲಿ ಶಾಲೆಯ ಮಹತ್ವ ಏನೆಂಬುದು ಎಲ್ಲ ಪಾಲಕರು ಮತ್ತು ಶಿಕ್ಷಣ ವರ್ಗಕ್ಕೆ ನವರಿಕೆಯಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಪ್ರತಿಭಾ ಕಾರಂಜಿ ಸ್ಥಗಿತಗೊಂಡಿದ್ದು, ಪಠ್ಯೇತರ ಚಟುವಟಿಕೆಗಳಿಲ್ಲದೆ ಶಾಲಾ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಹೆಚ್ಚಿತ್ತು.

ಸದ್ಯ ಶಾಲೆಗಳಲ್ಲಿ ಮತ್ತೆ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಪ್ರತಿಭಾ ಕಾರಂಜಿಯ ಮೂಲಕ ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಸಿಕ್ಕಂತಾಗಿದೆ ಎಂದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿಆರ್‌ಪಿ(ಶಿಕ್ಷಣ ಇಲಾಖೆ ಮಂಗಳೂರು ದಕ್ಷಿಣ) ಶೀಲಾವತಿ ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ದಕ್ಷಿಣ, ಬದ್ರಿಯಾ ನಗರ ಕ್ಲಸ್ಟರ್ ಮತ್ತು ಸಹರಾ ಆಂಗ್ಲ ಮಾಧ್ಯಮ ಶಾಲೆ ಅಡ್ಡೂರು ಇವರ ಸಂಯುಕ್ತ ಆಶ್ರಯದಲ್ಲಿ ಸಹರಾ ಶಾಲೆಯಲ್ಲಿ ಬುಧವಾರ ಆಯೋಜಿಸಲಾದ ೨೦೨೨-೨೩ನೇ ಸಾಲಿನ ಪ್ರಾಥಮಿಕ ವಿಭಾಗದ ‘ಪ್ರತಿಭಾ ಕಾರಂಜಿ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಭಾ ಕಾರಂಜಿ ಉದ್ಘಾಟಿಸಿದ ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಮಾತನಾಡಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಸ್ಪರ್ಧೆಯಲ್ಲಿ ಗೆದ್ದರೂ, ಸೋತರೂ ಸಾಧನೆಯ ಹಾದಿಯಲ್ಲಿ ಪ್ರಯತ್ನ ಬಿಡುವಂತಿಲ್ಲ ಎಂದರು.

ಶಾಲಾ ಅಧ್ಯಕ್ಷ, ಜಿಪಂ ಮಾಜಿ ಸದಸ್ಯ ಯು. ಪಿ ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗುರುಪುರ ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್ ಹಾಗೂ ಮತ್ತೊಬ್ಬ ಸಿಆರ್‌ಪಿ, ಕ್ಷೇತ್ರ ಶಿಕ್ಷಣಾಧಿಕಾರಿ ತಹಸೀನ್ ಅವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.

ಶಾಲಾ ಸಂಚಾಲಕ ಎ. ಕೆ ಇಸ್ಮಾಯಿಲ್, ಶಾಲಾ ಪಿಟಿಎ ಅಧ್ಯಕ್ಷ ವಿಶ್ವಂಭರ, ಗುರುಪುರ ಪಂಚಾಯತ್ ಸದಸ್ಯರಾದ ಮರಿಯಮ್ಮ, ಶಶಿಕಲಾ, ಪಿಟಿಎ ಉಪಾಧ್ಯಕ್ಷೆ ಪೂಜಾ ಕೆ, ಶಾಲಾ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಎಂ. ಎಚ್ ಮೈಯ್ಯದ್ದಿ, ಕಾರ್ಯದರ್ಶಿ ಎನ್. ಇಸ್ಮಾಯಿಲ್, ಜಂಟಿ ಕಾರ್ಯದರ್ಶಿ ನೂರುಲ್ ಅಮಿನ್, ಶಾಲಾ ಕೌನ್ಸಿಲರ್ ಡಾ. ಸಿದ್ದಿಕಿ, ಲೆಕ್ಕ ಪರಿಶೋಧಕ ಜಿ. ಪಿ ಮುಹಮ್ಮದ್, ಎ. ಕೆ ಮಹಮ್ಮದ್, ಎ. ಕೆ ಬಬ್ಬರ್, ಅಬ್ದುಲ್ ಅಝೀಝ್, ಜಿ. ಪಿ ಅಬ್ದುಲ್ ರಹಿಮಾನ್, ಎ. ಜಿ ಅಬೂಬಕ್ಕರ್, ಪಿಟಿಎ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರ ವರ್ಗ, ಪೋಷಕರು, ಬದ್ರಿಯಾ ಕಸ್ಟರ್‌ನ ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು.
ಸಹರಾ ಶಾಲಾ ಮುಖ್ಯ ಶಿಕ್ಷಕ ಕೇಶವ ಎಚ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಸಲೀಂ ವಂದಿಸಿದರು. ಪ್ರತಿಭಾ ಕಾರಂಜಿಯಲ್ಲಿ ಬದ್ರಿಯಾ ನಗರ ಕಸ್ಟರ್‌ನ ೬ ಸರ್ಕಾರಿ, ೪ ಅನುದಾನಿತ ಹಾಗೂ ೮ ಅನುದಾನರಹಿತ ಶಾಲೆಗಳ ಸಹಿತ ಒಟ್ಟು ೧೮ ಪ್ರಾಥಮಿಕ ಶಾಲೆಗಳ ನೂರಾರು ಮಕ್ಕಳು ಭಾಗವಹಿಸಿದ್ದರು.
