ಕಾರ್ಕಳ:ಯಕ್ಷ ಮಿತ್ರರು ದೊಂಡೇರಂಗಡಿ ಇವರ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಮೇಳದ ಹಾಗೂ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶ್ರೀ ರಾಮ ಮಂದಿರ ದೊಂಡೇರಂಗಡಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಹಾಗೂ ಹವ್ಯಾಸಿ ಹಿರಿಯ ಕಲಾವಿದರಾದ ಲಕ್ಷ್ಮಣ ಮಾಸ್ಟರ್ ಕುಕ್ಕುಜೆ ಇವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಮಂದಿರ ದೊಂಡೇರಂಗಡಿಯ ಆಡಳಿತ ಮಂಡಳಿ ಗೌರವಾಧ್ಯಕ್ಷರಾದ ಕೃಷ್ಣ ಶೆಣೈ, ಅರ್ಚಕರಾದ ರಾಘವೇಂದ್ರ ನಾಯಕ್, ಮಂದಾರ್ತಿ ಮೇಳದ ಭಾಗವತರಾದ ಕರುಣಾಕರ ಶೆಟ್ಟಿ ಕಾವಾಡಿ, ವಿನಯ್ ಆರ್.ಭಟ್ ಕುಕ್ಕುಜೆ ಉಪಸ್ಥಿತರಿದ್ದರು.

ಸುಭಾಸ್ ಪನೊಲು ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕರಾದ ಅರುಣ್ ಶೆಟ್ಟಿ ಬೈರಂಪಳ್ಳಿ ವಂದಿಸಿದರು. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
