ಬೈಲೂರಿನಲ್ಲಿ ಅತಿಸಾರ ಬೇಧಿ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ
ಕಾರ್ಕಳ: ಅತಿಸಾರ ಬೇಧಿ ತೀವ್ರತರ ನಿಯಂತ್ರಣ ಪಾಕ್ಷಿಕದ ಉದ್ಘಾಟನಾ ಸಮಾರಂಭವು ಪ್ರಾಥಮಿಕ ಆರೋಗ್ಯ ಕೇಂದ್ರ ಬೈಲೂರಿನಲ್ಲಿ ನಡೆಯಿತು.ನೀರೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಶಾಲಿನಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವೈದ್ಯಾಧಿಕಾರಿ ಡಾ. ಮಹಂತ್ ಹೆಗ್ಡೆ ಹೆಚ್ ಅವರು ಅತಿಸಾರ ಭೇದಿ ನಿಯಂತ್ರಣ ಮಾಡುವ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು.ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಗದೀಶ್ ಪೂಜಾರಿ ಮತ್ತು ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಅವರು ಉಪಸ್ಥಿತರಿದ್ದರು.

ಶ್ರೀಮತಿ ಜೀನಾ ಡಿಸೋಜ, ಸಮುದಾಯ ಆರೋಗ್ಯಾಧಿಕಾರಿ ಕಣಜಾರು ಇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಅರುಂಧತಿ ಜಿ ನಾಯಕ್ , ಸಮುದಾಯ ಆರೋಗ್ಯಾಧಿಕಾರಿ ಉಪಕೇಂದ್ರ ಎರ್ಲಪಾಡಿ ಅವರು ವಂದಿಸಿದರು.