ದೊಂಡೇರಂಗಡಿಯಲ್ಲಿ “ಯಕ್ಷ ಶಿಕ್ಷಣ” ಯಕ್ಷಗಾನ ತರಗತಿ ಪ್ರಾರಂಭ
ಕಾರ್ಕಳ: ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಸಂಘ (ರಿ.) ದೊಂಡೇರಂಗಡಿ ಕುಕ್ಕುಜೆ ಇದರ ವತಿಯಿಂದ ಬಡಗುತಿಟ್ಟಿನ “ಯಕ್ಷ ಶಿಕ್ಷಣ” ಸಂಪೂರ್ಣ ತರಗತಿಯ ಉದ್ಘಾಟನಾ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜೆಯಲ್ಲಿ ನಡೆಯಿತು.
ಯಕ್ಷಗಾನ ಗುರು ಮನೋಜ್ ಕುಮಾರ್ ಹೇರೂರು ಅವರು ಕರಾವಳಿಯ ಗಂಡು ಕಲೆಯಾದ ಯಕ್ಷಗಾನದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಹರೀಶ್ ದುಗ್ಗನ್ ಬೆಟ್ಟು, ಗೌರವಾಧ್ಯಕ್ಷರಾದ ದಿನೇಶ್ ಶೆಟ್ಟಿ, ಉಪಾಧ್ಯಕ್ಷ ವಿಜಯ್ ಹೆಗ್ಡೆ, ಜತೆ ಕಾರ್ಯದರ್ಶಿ ಪ್ರಶಾಂತ್ ಸಾಲ್ಯಾನ್, ಹಾಗೂ ಸದಸ್ಯರಾದ ಅರುಣ್ ಶೆಟ್ಟಿ ಬೈರಂಪಳ್ಳಿ,ವಿಠಲ್ ಕುಕ್ಕುಜೆ,ಮನ್ಮಥ ಕಕ್ಕೆಕಾಡು ಉಪಸ್ಥಿತರಿದ್ದರು. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರ್ವಹಿಸಿದರು.