ಕಡ್ತಲ ಗ್ರಾ.ಪಂ: ಪೋಷಣ್ ಅಭಿಯಾನ ಯೋಜನೆಯ ಅಂಗವಾಗಿ ವಿವಿಧ ಕಾರ್ಯಕ್ರಮ
ಕಾರ್ಕಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ, ಕಾರ್ಕಳ ಇವರ ವತಿಯಿಂದ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆನ್ನಿಬೆಟ್ಟು ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ ಯೋಜನೆಯ ಅಂಗವಾಗಿ ಅನ್ನ ಪ್ರಾಶನ, ಸೀಮಂತ, ಸಮುದಾಯ ಆಧಾರಿತ ಚಟುವಟಿಕೆ ಹಾಗೂ ಸುಪೋಷಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್,ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚಂದ್ರಿಕಾ ಕಿಣಿ,ಸಮುದಾಯ ಆರೋಗ್ಯ ಅಧಿಕಾರಿಗಳಾದ ಜಯಲಕ್ಷ್ಮಿ, ರಮ್ಯಾ ರಘುರಾಮ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಮ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪ , ಉಮಾವತಿ ಉಪಸ್ಥಿತರಿದ್ದರು.