ಕುಕ್ಕುಜೆ ಕಾಲೇಜು:ಕಾರ್ಕಳ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ
ಕಾರ್ಕಳ: ಶ್ರೀಮತಿ ಪದ್ಮಾವತಿ ಗೋವರ್ಧನ ನಾಯಕ್ ಸ್ಮರಣಾರ್ಥ ಸ.ಪ.ಪೂ.ಕಾಲೇಜು,ಕುಕ್ಕುಜೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ತಾಲೂಕು ಮಟ್ಟದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕಬಡ್ಡಿ ಪಂದ್ಯಾಟ ಕುಕ್ಕುಜೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಸೂರಜ್ ಜೈನ್ ಮಾಡಿದರು.
ಈ ಸಂದರ್ಭದಲ್ಲಿ ಕಡ್ತಲ ಗ್ರಾ.ಪಂ ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್, SBC ಕಾರ್ಯಧ್ಯಕ್ಷರಾದ ದಯಾನಂದ ಹೆಗ್ಡೆ, SDMC ಅಧ್ಯಕ್ಷರಾದ ಯಮುನಾ ಬೆಳಿರಾಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಂಜೀವ ಪೂಜಾರಿ, ಪ್ರಾಂಶುಪಾಲ ರಮೇಶ್ ನಾಯ್ಕ್, ಮುಖ್ಯ ಶಿಕ್ಷಕ ಪ್ರಶಾಂತ್ ಶೆಟ್ಟಿ,ಹಳೆ ವಿದ್ಯಾರ್ಥಿ ವಿಕಾಸ್ ಹೆಗ್ಡೆ, ಉದ್ಯಮಿಗಳಾದ ಯೋಗೀಶ್ ಮಲ್ಯ,ಪ್ರಸನ್ನ ಶೆಟ್ಟಿ ಮುಂಡಾರು ಹಾಗೂ ಗಜಾನಂದ ಕೋಟ್ಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ರಾಘವ ನಾಯ್ಕ್, ರೇಖಾ, ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಸಂಯೋಜಕರಾದ ಶರತ್ ಕುಮಾರ್, ನಿವೃತ್ತ ಅಧ್ಯಾಪಕರಾದ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.
ಫಲಿತಾಂಶ:
ವಿದ್ಯಾರ್ಥಿ ವಿಭಾಗ:
ಪ್ರಥಮ: ಸ.ಪ.ಪೂ.ಕಾಲೇಜು ಕುಕ್ಕುಜೆ, ದ್ವಿತೀಯ: ಸ.ಪ.ಪೂ.ಕಾಲೇಜು ಪಳ್ಳಿ,
ವಿದ್ಯಾರ್ಥಿನಿಯರ ವಿಭಾಗ:
ಪ್ರಥಮ:ವಿದ್ಯಾವರ್ಧಕ ಕಾಲೇಜು ಮುಂಡ್ಕೂರು, ದ್ವಿತೀಯ:ಸ.ಪ.ಪೂ.ಕಾಲೇಜು, ಕುಕ್ಕುಜೆ.