ಸ್ವಾತಂತ್ರ್ಯ ಅಮೃತ ಮಹೋತ್ಸವ, ಶಾಲೆಗೆ ಪ್ರಿಂಟರ್ ಕೊಡುಗೆ
ಕೈಕಂಬ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ, ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಫ್ರಾಥಮಿಕ ಶಾಲೆ ಕಿಲೆಂಜಾರು ಕುಪ್ಪೆಪದವು ಇದರ ಹಳೇ ವಿದ್ಯಾರ್ಥಿ ಗಳು ಶಾಲೆಗೆ ಕೊಡುಗೆಯಾಗಿ ಪ್ರಿಂಟರ್(ಮುದ್ರಣ ಯಂತ್ರ)ನ್ನು ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಮೃತ ಮಹೋತ್ಸವದ ಆಚರಣೆಯ ವೇಳೆ ಹಸ್ತಾಂತರಿಸಿದರು.
ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಮುದ್ರಣ ಯಂತ್ರ( ಫ್ರಿಂಟರ್) ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶೆರೀಫ್ ಪದ್ರಂಗಡಿ, ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯರಾದ ಶೆರೀಫ್ ಕಜೆ, ರಫೀಕ್ ಆಚಾರಿಜೋರ,ಹಳೇ ವಿದ್ಯಾರ್ಥಿ ಮುನೀರ್ ನಡುಪಲ್ಲ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಇನ್ನಿತರ ಗಣ್ಯರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.