ಕಲ್ಲಾಡಿ ಶಾಲೆ: ಶಾಸಕರ ಅನುದಾನದ ಶಾಲಾ ಕೊಠಡಿ ಉದ್ಘಾಟನೆ
ಕೈಕಂಬ: ಶಾಸಕ ಡಾ. ಭರತ್ ಶೆಟ್ಟಿ ಅವರ ಹತ್ತು ಲಕ್ಷ ರೂಪಾಯಿ ಅನುದಾನದಲ್ಲಿ, ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಡಿಯಲ್ಲಿ ನಿರ್ಮಿಸಲಾಗಿರುವ ಶಾಲಾ ಕೊಠಡಿಯನ್ನು ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಪಿ. ಹಮ್ಮಬ್ಬ ಮತ್ತು ತಾಲೂಕು ಪಂಚಾಯತ್ ಮಾಜಿ ಸದಸ್ಯ ಆರ್. ಕೆ.ಪ್ರಥ್ವಿರಾಜ್ ಅವರುಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸಂಧರ್ಭ ಜಂಟಿಯಾಗಿ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಪಂ. ಹಿರಿಯ ಪ್ರಾಥಮಿಕ ಶಾಲೆ ಇರುವೈಲು ಇಲ್ಲಿನ ದೈಹಿಕ ಶಿಕ್ಷಕ ಪ್ರೇಮಾನಂದ ಅವರನ್ನು ಸನ್ಮಾನಿಸಲಾಯಿತು. ಕಲ್ಲಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅರುಣಾ ಭಾಸ್ಕರ್ ಶೆಟ್ಟಿ ಬಾರ್ದಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಪ್ಪೆಪದವು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಮಂದೋಲಿಕರ, ಕಲ್ಲಾಡಿ ಪ್ರೌಢ ಶಾಲೆಯ ಮುಖ್ಯ್ಯೊಪಾಧ್ಯಾಯಿನಿ ಶ್ರೀಮತಿ ಸುರೇಖಾ, ಕಲ್ಲಾಡಿ ಶಾಲೆಯ ಮುಖ್ಯ್ಯೊಪಾಧ್ಯಾಯಿನಿ ಮೋಹಿನಿ ಭವಾನಂದ, ಬಿ.ಎ. ಅಬೂಬಕ್ಕರ್ ಕಲ್ಲಾಡಿ, ನಿವೃತ್ತ ಮುಖ್ಯ್ಯೊಪಾದ್ಯಾಯ ಶ್ರೀನಿವಾಸ್ ಎಂ., ನಿವೃತ್ತ ಮುಖ್ಯ್ಯೊಪಾಧ್ಯಾಯಿನಿ ಮೇರಿವಾಜ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹನೀಫ್ ಪೂವಣಿಬೆಟ್ಟು, ಹಿರಿಯರಾದ ರುಕ್ಮಯ ನಾಯ್ಕ್, ರಾಮಚಂದ್ರ ರೈ ಉಳಿಪಾಡಿ, ಹಳೇ ವಿದ್ಯಾರ್ಥಿ ಗಳಾದ ಶಿವರಾಮ ಶೆಟ್ಟಿ ಉಳಿಪಾಡಿ, ಆಲಿಯಬ್ಬ ಪೂವಣಿಬೆಟ್ಟು, ಶೇಖಬ್ಬ ಕಲ್ಲಾಡಿ, ಹಮೀದ್ ಬಾಲೆಮಾರ್,ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು. ಪೋಷಕರು, ಶಿಕ್ಷಕ ವೃoದ, ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮನೋಹರ್ ಶೆಟ್ಟಿ ನಡಿಕಂಬಲ ಮತ್ತು ಕುಮಾರಿ ಸುಚಿತ್ರಾ ಸ್ವಾಗತಿಸಿ, ನಿರೂಪಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ವಿದ್ಯಾ ಶೆಟ್ಟಿ ವಂದಿಸಿದರು. ನಂತರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.