ಆ.26ರಂದು 2021-2022 ನೇ ಸಾಲಿನ ವಾರ್ಷಿಕ ಜಮಾಬಂದಿ ಕಾರ್ಯಕ್ರಮ
ಪೊಳಲಿ: ಕರಿಯಂಗಳ ಗ್ರಾಮ ಪಂಚಾಯತ್ 2021-2022 ನೇ ಸಾಲಿನ ವಾರ್ಷಿಕ ಜಮಾಬಂದಿ ಕಾರ್ಯಕ್ರಮ ಆ.26ರಂದು ಶುಕ್ರವಾರ ಕರಿಯಂಗಳ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಡೆಯಲಿದೆ.
ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮ ಪಂಚಾಯತ್‌ನ 2021-2022 ನೇ ಈ ಕೆಳಗಿನಂತೆ ನಡೆಯಲಿರುವುದು. ಸದ್ರಿ ಜಮಾಬಂದಿಯಲ್ಲಿ ಗ್ರಾಮ ಸಾಲಿನ ಜಮಾಬಂದಿ ಪಂಚಾಯತಿಯು 2021-22 ನೇ ಸಾಲಿನಲ್ಲಿ ರೂಪಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳ ಭೌತಿಕ ಮತ್ತು ಆರ್ಥಿಕ ಪರಿಶೀಲನೆಯನ್ನು ಮಾಡಬಹುದಾಗಿರುತ್ತದೆ ಮತ್ತು ತತ್ಸಬಂದಿತ ದಾಖಲೆಗಳನ್ನು ಪರಿಶೀಲಿಸಬಹುದಾಗಿರುತ್ತದೆ.
ಪಂಚಾಯತಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಹೆಚ್ಚಿಸುವ ಸಲುವಾಗಿ ಸದ್ರಿ ಜಮಾಬಂದಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರಿಯಂಗಳ ಗ್ರಾಮದ ಗ್ರಾಮಸ್ಥರು ಕ್ಲಪ್ತ ಸಮಯಕ್ಕೆ ಹಾಜರಿದ್ದು, ಸೂಕ್ತ ಸಲಹೆಗಳನ್ನಿತ್ತು ಜಮಾಬಂದಿಯನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.