ಅಡ್ಡೂರು ಮುಖ್ಯಪ್ರಾಣ ದೇವರ ನೂತನ ಗರ್ಭಗುಡಿಗೆ ಶಿಲಾನ್ಯಾಸ
ಕೈಕಂಬ: ಪೊಳಲಿ ಸಮೀಪದ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ನೂತನ ಗರ್ಭಗುಡಿಗೆ ಆ.೨೦ರಂದು ಶನಿವಾರ ವೇದಮೂರ್ತಿ ಬ್ರಹ್ಮಶ್ರೀ ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯಯರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿತು.


ಸಮಾರಂಭದಲ್ಲಿ ಮುಖ್ಯಪ್ರಾಣ ದೇವಸ್ಥಾನದ ಅರ್ಚಕ ನಡುಮನೆ ಚಂದ್ರಶೇಖರ ಭಟ್, ಮಾಧವ ಭಟ್, ಶಾಸಕರಾದ ಡಾ. ಭರತ್ ಶೆಟ್ಟಿ ಮತ್ತು ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ಡಾ. ಮಂಜಯ್ಯ ಶೆಟ್ಟಿ(ಆಡಳಿತ ಮೊಕ್ತೇಸರ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ), ತಾರನಾಥ ಆಳ್ವ(ಆನುವಂಶಿಕ ಮೊಕ್ತೇಸರ, ಪೊಳಲಿ ದೇವಸ್ಥಾನ), ಕರಿಯಂಗಳ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ವೆಂಕಟೇಶ್ ನಾವಡ, ನಂದ್ಯ ಚಿದಾನಂದ ಗುರಿಕಾರ, ಗೌರವಾಧ್ಯಕ್ಷ ನೂಯಿ ಬಾಲಕೃಷ್ಣ ರಾವ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಭಟ್ ಗಂದಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ರಾವ್ ನೂಯಿ, ಹರೀಶ್ ಬಳ್ಳಿ, ಸಚಿನ್ ಅಡಪ, ರಾಜೇಶ್ ಸುವರ್ಣ, ಜಯಲಕ್ಷ್ಮಿ, ಸುಭಾಶ್ಚಂದ್ರ, ಯಶವಂತ ಪೂಜಾರಿ,ವಿಷ್ಣುಮೂರ್ತೀ ನಟ್ಟೋಜ, ಸುಬ್ರಾಯ ಕಾರಂತ, ಮತ್ತು ಊರ-ಪರವೂರ ಭಕ್ತರು ಉಪಸ್ಥಿತರಿದ್ದರು.








ಇದೇ ಸಂದರ್ಭದಲ್ಲಿ ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಡ್ಡೂರು ಇದರ ಜೀರ್ಣೋದ್ಧಾರ ಅತೀ ಶೀಘ್ರವಾಗಿ ನೆರವೇರುವ ಬಗ್ಗೆ ಶ್ರೀ ರಾಮ ತಾರಕ ಮಂತ್ರ ” ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಎಂಬ ಶ್ಲೋಕವನ್ನು ಪುಸ್ತಕದಲ್ಲಿ ಬರೆದು ಹಾಗೂ ಮನೆಗಳಲ್ಲಿ ಪಠಿಸಲು ಶ್ರೀ ರಾಮ ತಾರಕ ಮಂತ್ರದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
