ಕುಪ್ಪೆಪದವು ಘಟಕದ ವತಿಯಿಂದ ಕೃಷ್ಣ ವೇಷ ಸ್ಪರ್ಧೆ
ಕೈಕಂಬ: ಯುವವಾಹಿನಿ(ರಿ) ಕುಪ್ಪೆಪದವು ಘಟಕ ಇದರ ವತಿಯಿಂದ ಕೃಷ್ಣ ವೇಷ ಸ್ಪರ್ಧೆ ಭಾನುವಾರ ಕುಳವೂರು ಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಅಧ್ಯಕ್ಷ, ಮುತ್ತೂರು ಪಂ. ಸದಸ್ಯ ಜಗದೀಶ್ ದುರ್ಗಾಕೋಡಿ ವಹಿಸಿದ್ದರು. ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಪಂಚಾಯತ್ ಉಪಾಧ್ಯಕ್ಷೆ ಮಾಲತಿ ಗಿರೀಶ್, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಭವಾನಂದ ಶೆಟ್ಟಿ ಮುತ್ತೂರು, ಪಂಚಾಯತ್ ನ ಸ್ಥಳೀಯ ವಾರ್ಡ್ ಸದಸ್ಯೆ ಸುಷ್ಮಾ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ವಿನಿ ಅಟ್ಟೆಪದವು ಸ್ವಾಗತಿಸಿದರು.

3 ವರ್ಷದ ಮಕ್ಕಳಿಗೆ ತುಂಟಕೃಷ್ಣ, 4ರಿಂದ 6ವರ್ಷದ ಮಕ್ಕಳಿಗೆ ಬೆಣ್ಣೆ ಕೃಷ್ಣ, 7ರಿಂದ 10 ವರ್ಷದ ಒಳಗಿನ ಮಕ್ಕಳಿಗೆ ಯಶೋದ ಕೃಷ್ಣ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟು 46 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಬಹಳ ಉತ್ಸಹ ದಿಂದ ಮಕ್ಕಳು ಭಾಗವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾಜೇಶ್ ಬಂಟ್ವಾಳ ಮಾತನಾಡಿದರು. ಕುಪ್ಪೆಪದವು ಘಟಕದ ಅಧ್ಯಕ್ಷ ಜಗದೀಶ್ ದುರ್ಗಾಕೊಡಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹಾಗೂ ಘಟಕದ ನಿಕಟಪೂರ್ವ ಅಧ್ಯಕ್ಷ ಸತೀಶ್ ಹೊಸಮನೆ, ತೀರ್ಪುಗಾರ ದಿನಕರ ಮೆಂಡ, ಬಜಪೆ ಘಟಕದ ಮಾಜಿ ಅಧ್ಯಕ್ಷ ದೇವರಾಜ ಅಮೀನ್, ದೇವಳದ ಆಡಳಿತ ಮಂಡಳಿ ಸದಸ್ಯ ಭವಾನಂದ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಸುಷ್ಮಾ ಸಂತೋಷ್ ಮತ್ತು ಕುಪ್ಪೆಪದವು ಘಟಕದ ಕಾರ್ಯದರ್ಶಿ ರಕ್ಷಿತ್ ಅಟ್ಟೆಪದವು ವೇದಿಕೆಯಲ್ಲಿ ಇದ್ದರು.
ಅಜಯ ಅಮೀನ್ ಸ್ವಾಗತಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸ್ಪರ್ಧೆಯ ತೀರ್ಪುಗಾರರಾಗಿ ದಿನಕರ್ ಮೆಂಡ ಮತ್ತು ಲಿಖಿತ್ ಕುಮಾರ್ ಸಹಕರಿಸಿದರು. ಅಜಯ್ ಅಮೀನ್ ಸ್ವಾಗತಿಸಿದರು. ಅಕ್ಷಿತ್ ಕುಮಾರ್ ವಂದಿಸಿ, ಅರುಣ್ ಕುಮಾರ್ ನಿರೂಪಿಸಿದರು.