ಕುಪ್ಪೆಪದವು: ಸ್ವಾತಂತ್ರ್ಯ ಅಮೃತ ಮಹೋತ್ಸವ. ರಿಕ್ಷಾ ಚಾಲಕರು ತಾವೇ ನಿರ್ಮಿಸಿಕೊಂಡ ಸೂರು ಉದ್ಘಾಟನೆ
ಕೈಕಂಬ: ಕಳೆದ ಸುಮಾರು ಮೂವತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ರಿಕ್ಷಾ ಪಾರ್ಕ್ ನಲ್ಲಿ ರಿಕ್ಷಾ ಚಾಲಕರು ಗಾಳಿಮಳೆಯಿಂದ ರಕ್ಷಣೆ ಪಡೆದುಕೊಳ್ಳಲು, ಸೂರೊಂದನ್ನು ನಿರ್ಮಿಸಿಕೊಳ್ಳಲು ಮಾಡಿದ ಸತತ ಪ್ರಯತ್ನಗಳು ವಿಫಲವಾದ ನಂತರ ಸ್ವತ: ತಾವೇ ತಮ್ಮ ಸ್ವಂತ ದುಡ್ಡು ಹಾಗೂ ಒಂದೆರಡು ಸ್ಥಳೀಯ ದಾನಿಗಳ ಸಹಕಾರದಿಂದ ಸುಮಾರು 80 ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಂಡ ಪುಟ್ಟದಾದ ರಿಕ್ಷಾ ಪಾರ್ಕ್ ಅನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸಂಧರ್ಭ ಸೋಮವಾರ ಉದ್ಘಾಟನೆಗೊಂಡಿತು.
ಕುಪ್ಪೆಪದವು ರಿಕ್ಷಾ-ಚಾಲಕ ಮಾಲಕರ ಸಂಘದ ಅಧ್ಯಕ್ಷ ವಸಂತ ಆಚಾರಿ ಅವರು ನೂತನ ರಿಕ್ಷಾ ಪಾರ್ಕ್ ಉದ್ಘಾಟಿಸಿ ನಂತರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಸಂಘದ ಉಪಾಧ್ಯಕ್ಷ ಇದಿನಬ್ಬ ಪೂವಣಿಬೆಟ್ಟು,ನಿವೃತ್ತ ದೈಹಿಕ ಶಿಕ್ಷಕ ಭೋಜರಾಜ್ ಜೈನ್, ಕುಪ್ಪೆಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿಮಲಾ, ಸದಸ್ಯರುಗಳಾದ ನಿತೇಶ್ ದೊಡ್ಡಳಿಕೆ, ಶರೀಫ್ ಕಜೆ, ರಫೀಕ್ ಆಚಾರಿಜೋರ, ಶ್ರೀಮತಿ ಮಂಜುಳಾ, ಶ್ರೀಮತಿ ವಿನೋದ, ಶ್ರೀಮತಿ ವಿಜಯಾ. ಮುತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಆಳ್ವ ಗುಂಡ್ಯ, ಜಗದೀಶ್ ದುರ್ಗಾಕೋಡಿ, ಹಿರಿಯ ರಿಕ್ಷಾ ಚಾಲಕ ಲಿಂಗಪ್ಪ ಕೋಟ್ಯಾನ್(ಕರಿಯಣ್ಣ), ಬಹುಜನ ಸೇವಾ ಟ್ರಸ್ಟ್ ನ ಮುನೀರ್ ನಡುಪಲ್ಲ, ಉಮರಬ್ಬ ಮೊದಲಾದವರು ಹಾಜರಿದ್ದರು.
ರಿಕ್ಷಾ ಚಾಲಕರಾದ ಮಹಾಬಲ ಸಾಲ್ಯಾನ್ ಸ್ವಾಗತಿಸಿದರು. ರವಿ ಅಟ್ಟೆಪದವು ನಿರೂಪಿಸಿ ಅಶೋಕ್ ವಂದಿಸಿದರು.