ಬಂಟ್ವಾಳ: ೨೧ರಂದು ದೇವಾಡಿಗ ಸಮಾಲೋಚನಾ ಸಭೆ
ಬಂಟ್ವಾಳ: ತಾಲ್ಲೂಕಿನಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳ ಜೊತೆಗೆ ರಾಜಕೀಯ ಮತ್ತು ಆರ್ಥಿಕವಾಗಿ ಸಮಾಜವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ದೇವಾಡಿಗ ಸಮಾಜದ ಸಮಾಲೋಚನಾ ಸಭೆ ಇದೇ ೨೧ರಂದು ಬೆಳಿಗ್ಗೆ ಗಂಟೆ ೯.೩೦ಕ್ಕೆ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ನಡೆಯಲಿದೆ.
ಇಲ್ಲಿನ ಇತಿಹಾಸ ಪ್ರಸಿದ್ಧ ಪೊಳಲಿ ಕ್ಷೇತ್ರಕ್ಕೆ ಕಿರು ರಥ ಸಮರ್ಪಿಸಿದ ದೇವಾಡಿಗ ಸಮುದಾಯವು ಇಲ್ಲಿನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದೇವಸ್ಥಾನಕ್ಕೆ ಕಿರು ರಥ ಸಮರ್ಪಿಸುವ ಬಗ್ಗೆಯೂ ಚಿಂತನೆ ನಡೆಸಲಿದೆ ಎಂದು ದೇವಾಡಿಗ ಸೇವಾ ವೇದಿಕೆ ಅಧ್ಯಕ್ಷ ಪದ್ಮನಾಭ ದೇವಾಡಿಗ ತಿಳಿಸಿದ್ದಾರೆ.