ಪುದು: ೨೧ರಂದು ಶ್ರೀಗುರು ಕ್ರೆಡಿಟ್ ಸೊಸೈಟಿ ಶಾಖೆ ಆರಂಭ
ಬಂಟ್ವಾಳ: ಮೆಲ್ಕಾರ್ ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಕಡೆಗೋಳಿ ಶಾಖೆಯು ಇದೇ ೨೧ರಂದು ಬೆಳಿಗ್ಗೆ ಗಂಟೆ ೧೦.೩೦ಕ್ಕೆ ಪುದು ಗ್ರಾಮದ ಕಡೆಗೋಳಿ ಶ್ರೀ ನಾರಾಯಣ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ತಿಳಿಸಿದರು.
ಬಿ.ಸಿ.ರೋಡಿನಲ್ಲಿ ಆ.17ರಂದು ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ೨೦೧೨ರಲ್ಲಿ ಪ್ರಾರಂಭಗೊಂಡ ಸೊಸೈಟಿಯು ಈಗಾಗಲೇ ಪಚ್ಚಿನಡ್ಕ, ಕಕ್ಯಪದವು, ಅಜಿಲಮೊಗರಿನಲ್ಲಿ ಶಾಖೆಗಳನ್ನು ತೆರೆದು ಗ್ರಾಮೀಣ ಪ್ರದೇಶದಲ್ಲಿ ತನ್ನ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೂತನ ಶಾಖೆ ಉದ್ಘಾಟಿಸಲಿದ್ದು, ಶಾಸಕ ಯು.ಟಿ.ಖಾದರ್ ಸೇಫ್ ಲಾಕರ್ ಉದ್ಘಾಟಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ, ನಿರ್ದೇಶಕರಾದ ಕೆ.ಸಂಜೀವ ಪೂಜಾರಿ, ರತ್ನಾಕರ ಪೂಜಾರಿ ನಾಡಾರ್, ಉಮೇಶ್ ಸುವರ್ಣ ತುಂಬೆ, ಸಿಇಒ ಪ್ರವೀಣ್ ಇದ್ದರು.