ಕೊಯಿಲ ಸರ್ಕಾರಿ ಪ್ರೌಢಶಾಲೆ: ಅಟಲ್ ಟಿಂಕರಿಂಗ್ ಲ್ಯಾಬ್ ಲೋಕಾರ್ಪಣೆ ಕೌಶಲ್ಯಭರಿತ ಶಿಕ್ಷಣಕ್ಕೆ ಒತ್ತು; ಶಾಸಕ ರಾಜೇಶ ನಾಯ್ಕ್
ಬಂಟ್ವಾಳ: ತಾಲ್ಲೂಕಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕ ಸಿಪ್ರಿಯನ್ ಡಿಸೋಜ ಇವರನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರು ಶನಿವಾರ ಸನ್ಮಾನಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಗ್ರಾಮೀಣ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಅಟಲ್ ಟಿಂಕರಿAಗ್ ಲ್ಯಾಬ್ ಒದಗಿಸುವ ಮೂಲಕ ಅವರಲ್ಲಿ ಕೌಶಲ್ಯ ವೃದ್ಧಿಸುವ ಬಗ್ಗೆ ವಿಶೇಷ ಒತ್ತು ನೀಡುತ್ತಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ನಬಾರ್ಡ್ ಯೋಜನೆಯಡಿ ರೂ ೨೭.೭೫ ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಂಡ ‘ಅಟಲ್ ಟಿಂಕರಿAಗ್ ಲ್ಯಾಬ್’ ಮತ್ತು ನರೇಗಾ ಯೋಜನೆಯಡಿ ರೂ ೬ಲಕ್ಷ ವೆಚ್ಚದಲ್ಲಿ ನಿಮಾಣಗೊಂಡ ಅಕ್ಷರ ದಾಸೋಹ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಮತ್ತು ಸಾರಕ್ಷರತಾ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ರೂ ೩ಲಕ್ಷ ವೆಚ್ಚದಲ್ಲಿ ಶಾಲಾ ಕಾಂಕ್ರೀಟು ರಸ್ತೆ ಉದ್ಘಾಟನೆ ಮತ್ತು ನಾಮಫಲಕ ಅನಾವರಣಗೊಳಿಸಿದ ಶಾಸಕರು ಮುಖ್ಯಶಿಕ್ಷಕ ಸಿಪ್ರಿಯನ್ ಡಿಸೋಜ ಇವರನ್ನು ಸನ್ಮಾನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಜ್ಞಾನೇಶ್, ಸಿ ಆರ್ ಪಿ ಪ್ರೇಮಲತಾ, ನೋಡೆಲ್ ಅಧಿಕಾರಿ ಬಿ.ಕೆ.ವೇದಾವತಿ, ಪ್ರಮುಖರಾದ ಹರೀಶ ಆಚಾರ್ಯ ರಾಯಿ, ಕೆ.ಪರಮೇಶ್ವರ ಪೂಜಾರಿ, ಉಮೇಶ ಅರಳ, ರಾಜೇಶ ಜೈನ್ ಪಡ್ರಾಯಿ, ಮಧ್ವರಾಜ್ ಜೈನ್, ಪ್ರಭಾಕರ, ಸುಜಾತ, ಜೋಸೆಫ್ ಹಿಲರಿ ಲೋಬೋ ಇದ್ದರು. ಮುಖ್ಯಶಿಕ್ಷಕ ಸಿಪ್ರಿಯನ್ ಡಿಸೋಜ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಎಚ್. ವಂದಿಸಿದರು. ಶಿಕ್ಷಕ ಪ್ರವೀಣ ಕಾಮತ್ ಕೆ.ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕ ಸಿಪ್ರಿಯನ್ ಡಿಸೋಜ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಎಚ್. ವಂದಿಸಿದರು. ಶಿಕ್ಷಕ ಪ್ರವೀಣ ಕಾಮತ್ ಕೆ.ಕಾರ್ಯಕ್ರಮ ನಿರೂಪಿಸಿದರು.