ಕರಿಯಂಗಳ ಗ್ರಾ.ಪಂ.75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಟ ಕೊಳದ ಬಳಿ ಎಂಬಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಸರೋವರ ಯೋಜನೆಯಲ್ಲಿ ಪುನಃಶ್ವೇತನಗೊಳ್ಳಲಿರುವ ಕೆರೆಯ ಬಳಿ ಆ.15ರಂದು ಸೋಮವಾರ ಬೆಳಿಗ್ಗೆ 9:30ಕ್ಕೆ ಕ ಧ್ವಜಾರೋಹಣ ಜರಗಲಿದೆ.
ಮಾಜಿ ಸೈನಿಕರು ಬಡಕಬೈಲ್ ಜನೀಶ್ ಎ.ಎಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚಂದ್ರಹಾಸ ಪಲ್ಲಿಪಾಡಿ ಅವರ ಅಧ್ಯಕ್ಷತೆ ವಹಿಸಲಿದ್ದಾರೆ, ಮಂಜುನಾಥ ಭಂಡಾರಿ ಅವರ ಘನ ಉಪಸ್ಥಿತಿಯಲ್ಲಿ, ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದೆ.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ರಾಜಣ್ಣ, ತಾರಾನಾಥ ಸಾಲಿಯಾನ್, ದಿನೇಶ್, ಹರಿಣಾಕ್ಷಿ, ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೂಕ್ತೇಸರ ಮಂಜಯ್ಯ ಶೆಟ್ಟಿ, ಹಾಫಿಳ್ ಅಬ್ದುಲ್ ಮಜೀದ್ ಸಖಾಫಿ ಗಾಣಿಮಾರ್, ಸಂಪತ್ ಕುಮಾರ್, ವಿಜಯ ಪೆರ್ನಾಂಡಿಸ್, ಪುನೀತ್ ಶೆಟ್ಟಿ, ಪ್ರಸಾದ್ ಕುಮಾರ್ ಉಪಸ್ಥಿತರಿರುವರು