ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಅಂಗವಾಗಿ ಅಗ್ನಿವೀರ್ ವಿಚಾರಗೋಷ್ಠಿ
ಕೈಕಂಬ : ದೇಶ ವಿಶ್ವಗುರುವಾಗುವಲ್ಲಿ ಎಲ್ಲರಲ್ಲೂ ಒಂದು ‘ವಿಜನ್'ಇರಬೇಕಾಗುತ್ತದೆ. ಕೇಂದ್ರದ
ಅಗ್ನಿಪಥ್’ ಅಂತಹ ವಿಜನ್‌ಗೆ ಪೂರಕ ಯೋಜನೆಯಾಗಿದೆ. ಯುವಜನರು ಒಂದು ಉದ್ದೇಶವಿಟ್ಟುಕೊಂಡು ಮುಂದುವರಿಯಬೇಕು. ಅಗ್ನಿಪಥ್' ಯೋಜನೆಯಡಿ ನೀವು(ಯುವಜನರು)
ಅಗ್ನಿವೀರ್’ ಆಗಲು ಒಂದು ಬಲವಾದ ಸುದುದ್ದೇಶ ಇಟ್ಟುಕೊಳ್ಳಿ. ಆ ಮೂಲಕ, ಯೋಜನೆಯಲ್ಲಿರುವ ಉನ್ನತ ಪದವಿ ವ್ಯಾಸಂಗ ಮತ್ತು ಭವಿಷ್ಯದ ಉನ್ನತ ಹುದ್ದೆಗಳ ಅವಕಾಶ ನಿಮ್ಮದಾಗಿಸಿಕೊಳ್ಳಿ ಎಂದು ಮಂಗಳೂರು ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅನಂತ ಪ್ರಭು ಜಿ. ಹೇಳಿದರು.
ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಅಂಗವಾಗಿ ಮೂಡುಶೆಡ್ಡೆಯ ಶಾರದಾ ಶುಭೋದಯ ವಿದ್ಯಾಲಯದಲ್ಲಿ ಆ. 12ರಂದು ಶನಿವಾರ ಆಯೋಜಿಸಲಾದ ಅಗ್ನಿಪಥ್'ಯೋಜನೆಯ ವೈಶಿಷ್ಟ್ಯಗಳು ವಿಷಯದಲ್ಲಿ ಆಯೋಜಿಸಲಾದ ವಿಚಾರಗೋಷ್ಠಿಯಲ್ಲಿ
ಅಗ್ನಿವೀರ್’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಗೋಷ್ಠಿ ಉದ್ಘಾಟಿಸಿದ ತುಳು ಚಿತ್ರನಟ ವಿನೀತ್ ಕುಮಾರ್ ಮಾತನಾಡಿ, ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಣ್ಣ ವಿಷಯವೂ ಕೆಲವೊಮ್ಮೆ ಭವಿಷ್ಯ ರೂಪಿಸಬಹುದು. ಆದರೆ ಆ ವಿಷಯವನ್ನು ಫಾಲೋ ಮಾಡುವ ಛಲ, ಗುರಿ ಮತ್ತು ಹಮ್ಮಸ್ಸು ನಮ್ಮಲ್ಲಿರಬೇಕು. ನಮ್ಮಲ್ಲಿ ದೇಶ ಕಾಯುವ ಯೋಧನಾಗಬೇಕೆಂಬ ಆಸೆ ಇಟ್ಟುಕೊಂಡವರ ಸಂಖ್ಯೆ ತೀರಾ ವಿರಳವಾಗಿದೆ. ಆದರೆ ಯುವಜನರಿಂದ `ಅಗ್ನಿಪಥ್’ ಯೋಜನೆಗೆ ಸಿಗುತ್ತಿರುವ ಬೆಂಬಲ ನೋಡಿದಾಗ ಈ ಮಾತು ಸುಳ್ಳಾಗುತ್ತಿದೆ ಎಂದರು.
`ಅಪರಾಧ ರಹಿತ ಸಮಾಜ’ ಕುರಿತಾಗಿ ಮಂಗಳೂರು ವಿಮಾನ ನಿಲ್ದಾಣದ ಪೊಲೀಸ್ ಇಲಾಖೆ ಸಂಪರ್ಕಾಧಿಕಾರಿ ಗೋಪಾಲಕೃಷ್ಣ ಕುಂದರ್ ಮಾತನಾಡಿ, ಆತ್ಮಸಾಕ್ಷಿö್ಯಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಯಾವುದೇ ವಿಷಯವನ್ನು ಕೂಲಂಕಷ ಪರಿಶೀಲಿಸಿ ಮುಂದುವರಿಯಬೇಕು. ಈ ನಿಟ್ಟಿನಲ್ಲಿ ಪ್ರಶ್ನಿಸುವ ಗುಣ ಬೆಳಸಿಕೊಳ್ಳಬೇಕು. ನಮ್ಮನ್ನು ಗದರಿಸುವವರೇ ನಿಜವಾದ ಆಪ್ತರು ಎಂದು ತಿಳಿದುಕೊಳ್ಳಬೇಕು. ಮಾನಸಿಕವಾಗಿ ಸದೃಢವಾಗಿದ್ದಲ್ಲಿ ಯಾರೆಂದೂ ಅಪರಾಧ ಮಾಡರು. ಮನಸ್ಸಿನ ಮೇಲೆ ಹಿಡಿತವಿರಲಿ ಎಂದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಸಿಐಎಸ್‌ಎಫ್ ಅಧಿಕಾರಿಗಳು ಸಭಿಕರಿಗೆ ರಾಷ್ಟçಧ್ವಜ ಹಂಚಿದರು. ಶಾಲಾ ಶಿಕ್ಷಕ ವೃಂದದವರು ರಾಷ್ಟ್ರಭಕ್ತಿಯ ಗೀತೆ ಹಾಡಿದರು. ಮಕ್ಕಳು ರಾಷ್ಟ್ರಭಕ್ತಿಯ ಸಂಗೀತಮಯ ಹಾಡು ಹಾಡಿದರು. ಪ್ರಾಂಶುಪಾಲೆ ಶ್ಯಾಮಲಾ ವೈ, ಉಪ ಪ್ರಾಂಶುಪಾಲರಾದ ಗೋಪಾಲಕೃಷ್ಣ ಭಟ್ ಮತ್ತು ಶಶಿಕಲಾ, ಶಾಲಾ ಸಿಇಒ ಶಮೀರ್ ಪುರಾಣಿಕ್, ಪಿಟಿಎ ಅಧ್ಯಕ್ಷ ಪ್ರಥ್ವಿ ಶೆಟ್ಟಿ, ಮೂಡುಶೆಡ್ಡೆ ಪಂಚಾಯತ್ ಅಧ್ಯಕ್ಷೆ ಜಯಶ್ರೀ, ಪಿಡಿಒ ಜಯಪ್ರಕಾಶ್ ಹಾಗೂ ಸದಸ್ಯರು, ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಭವಿಷ್ಯ ಸ್ವಾಗತಿಸಿದರೆ, ಉಪ ಪ್ರಾಂಶುಪಾಲ ಗೋಪಾಲಕೃಷ್ಣ ಭಟ್ ಪ್ರಸ್ತಾವಿಸಿದರು. ಶಿಕ್ಷಕಿ ಕೆ. ಎಸ್. ಚೈತ್ರಾ ಹಾಗೂ ಪೂಜಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಭವ್ಯಾ ಎಸ್. ವಂದಿಸಿದರು.