ಬೆಳ್ಳೂರು ಬಂಟರ ವಲಯದ ಆಟಿದ ಕೂಟ
ಕೈಕಂಬ : ಬಂಟ್ವಾಳ ತಾಲೂಕಿನ ಬೆಳ್ಳೂರು ವಲಯ ಬಂಟರ ಸಂಘದ ವತಿಯಿಂದ ಕಾವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆ. 7ರಂದು ಭಾನುವಾರ ಆಟಿದ ಕೂಟ ಕಾರ್ಯಕ್ರಮ ನಡೆಯಿತು. ಸಂಘದ ಗೌರವಾಧ್ಯಕ್ಷ ರಘುನಾಥ ಪಯ್ಯಡೆ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕ ಅಶ್ವಿನ್ ಶೆಟ್ಟಿ ಬೊಂಡಂತಿಲಗುತ್ತು ಆಟಿ ಆಚರಣೆ ಪದ್ಧತಿ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ತಾಲೂಕು ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರಮಾ ಭಂಡಾರಿ ಶುಭ ಹಾರೈಸಿದರು ಇದೇ ವೇಳೆ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಮುಖರಾದ ಮಾಜಿ ಸಚಿವ ಬಿ.ರಮಾನಾಥ ರೈ, ಸಂತೋಷ್ ಶೆಟ್ಟಿ ಮುಂಬೈ, ಜಗನ್ನಾಥ ಚೌಟ ಬದಿಗುಡ್ಡೆ, ರಂಜನ್ ಕುಮಾರ್ ಶೆಟ್ಟಿ ಅರಳ, ಕೆ. ಧನಂಜಯ ರೈ, ರಮಾ ಭಂಡಾರಿ, ಬೆಳ್ಳೂರು ಬಂಟರ ಸಂಘದ ಅಧ್ಯಕ್ಷ ಕೆ. ಜನಾರ್ಧನ ಶೆಟ್ಟಿ, ನಿಶಾನ್ ಆಳ್ವ, ಬಡಗಬೆಳ್ಳೂರು ಗ್ರಾಂ ಪಂ.ಅದ್ಯಕ್ಷ ಪ್ರಕಾಶ್ ಆಳ್ವ, ಮಲ್ಲಿಕಾ ಶೆಟ್ಟಿ ಅಮ್ಟಾಡಿ, ಸುಕೇಶ ಚೌಟ, ಚಂದ್ರಹಾಸ ಶೆಟ್ಟಿ ನಾರ್ಲ, ಚರಣ್ ಆಳ್ವ, ಪ್ರದೀಪ್ ಶೆಟ್ಟಿ, ರತ್ನಾಕರ ಶೆಟ್ಟಿ, ಸದಾಶಿವ ಶೆಟ್ಟಿ, ಕೃಷ್ಣಪ್ರಸಾದ್ ರೈ, ಡಾ.ರಾಜೇಶ ಶೆಟ್ಟಿ, ರಾಧಾಕೃಷ್ಣ ಆಳ್ವ, ಉಮೇಶ ಶೆಟ್ಟಿ ದೇವಸ್ಯ, ಕೊಸ್ಟಲ್ ವುಡ್ , ತುಳು ಹಾಗೂ ಕನ್ನಡ ಚಿತ್ರ ನಟ ಅವಿನಾಶ್ ಆಸ್ತಿಕ್ ಶೆಟ್ಟಿ, ಮತ್ತಿತರರು ಇದ್ದರು. ಸಂಘದ ಕಾರ್ಯದರ್ಶಿ ನರೇಶ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಿಶೋರ್ ಭಂಡಾರಿ ವಂದಿಸಿದರು. ಪ್ರಶಾಂತ್ ಬಿ.ಶೆಟ್ಟಿ ಶಿರ್ವ ನಿರೂಪಿಸಿದರು.