Published On: Wed, Aug 10th, 2022

ಮಂಗಳೂರು ತಾಲೂಕು ಬಿಲ್ಲವ ಸಂಘ(ರಿ) ಇದರ ಪೂರ್ವಭಾವಿ ಸಭೆ


ಕೈಕಂಬ : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಸೆಪ್ಟೆಂಬರ್ ೪ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿರುವ ಮಂಗಳೂರು ತಾಲೂಕು ಬಿಲ್ಲವ ಸಂಘ(ರಿ) ಇದರ ಪೂರ್ವಭಾವಿ ಸಭೆ ಆ. ೯ರಂದು ಉರ್ವದ ಬಿಲ್ಲವ ಭವನದಲ್ಲಿ ನಡೆಯಿತು.

ಪ್ರವೀಣ್ ನೆಟ್ಟಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸಭೆಯಲ್ಲಿ ನೂತನ ತಾಲೂಕು ಬಿಲ್ಲವ ಸಂಘ ರಚನೆ ಮತ್ತು ಅದರ ಕಾರ್ಯವೈಖರಿ ಬಗ್ಗೆ ಬಿಲ್ಲವ ಬಂಧುಗಳಿಂದ ಹಲವು ಮಹತ್ವದ ಸಲಹೆ, ಸೂಚನೆಗಳು ಕೇಳಿಬಂತು.


ಸಲಹೆಗಳು :

  • ಬಿಲ್ಲವ ಸಮಾಜದಲ್ಲಿ ಹಲವು ಸಂಘಟನೆಗಳು ಇದ್ದರೂ, ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ.
  • ಬಿಲ್ಲವ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು.
  • ನಮ್ಮ ಹಕ್ಕುಗಳಿಗಾಗಿ ಹೋರಾಟ ತೀವ್ರಗೊಳಿಸುವ ಅಗತ್ಯವಿದೆ.
  • ಬಿಲ್ಲವರ ಮಕ್ಕಳಲ್ಲಿ ಬಿಲ್ಲವ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸಬೇಕು.
  • ಪ್ರತಿಯೊಬ್ಬ ಬಿಲ್ಲವನೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ-ಸಿದ್ಧಾಂತ ಪ್ರತಿಶತ ಪಾಲಿಸಬೇಕು.
  • ಗುರುಗಳ ತತ್ವಾದರ್ಶಗಳ ಮುಖೇನ ಸಂಘಟನೆ ಬಲಗೊಳಿಸುವಲ್ಲಿ ಬಿಲ್ಲವ ಸಮಾಜಕ್ಕೆ ಸರ್ವ ಸಮರ್ಥ ನಾಯಕರೊಬ್ಬರನ್ನು ರೂಪಿಸಬೇಕು.
  • ಸಂಘಟನೆಯೊಳಗೆ ರಾಜಕೀಯ ತರದೆ, ರಾಜಕೀಯ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಾವು ಬೆಳೆಯಬೇಕು.
  • ಬಿಲ್ಲವರ ಮಕ್ಕಳು ಹೆಸರಿನ ಮುಂದೆ `ಪೂಜಾರಿ’ ಸೇರಿಸಿಕೊಳ್ಳಬೇಕು.
  • ಸಂಘದಿಂದ ಸರಳ ವಿವಾಹಕ್ಕೆ ಪ್ರೋತ್ಸಾಹ ಸಿಗಬೇಕು.
  • ಎಲ್ಲೇ ಆಗಲಿ ಗುರುಗಳು ಅಥವಾ ಬಿಲ್ಲವರಿಗೆ ಅಗೌರವ ತೋರಸಲಾದ ಸಂದರ್ಭಗಳಲ್ಲಿ ಬಿಲ್ಲವರೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು.

ಸಭಿಕರಿಂದ ಕೇಳಿ ಬಂದ ಸಲಹೆಗಳ ಬಗ್ಗೆ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ ಮಾತನಾಡಿ, ಬಿಲ್ಲವ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಕಾಳಜಿಯಿಂದಲೇ ಹುಟ್ಟಿಕೊಂಡಿರುವ ಈ ಸಂಘದಲ್ಲಿ ಹಲವು ನಿರ್ದಿಷ್ಟ ಯೋಜನೆಗಳಿವೆ. ಬಿಲ್ಲವರಲ್ಲಿ ವ್ಯಾವಾಹರಿಕ ವಿದ್ಯೆ ಇದ್ದರೂ, ಸಂಸ್ಕಾರಕ್ಕೆ ಸಂಬಂಧಿಸಿದಂತೆ ನಾವು ವಿದ್ಯಾ ಶೂನ್ಯರಾಗುತ್ತಿದ್ದೇವೆ. ಜಿಲ್ಲೆ ಅಥವಾ ತಾಲೂಕಿನಲ್ಲಿ ಬಹುಸಂಖ್ಯಾತರಾಗಿರುವ ಬಿಲ್ಲವರಿಗೆ ಹೇಳಿಕೊಳ್ಳುವಂತಹ ಉನ್ನತ ಸ್ಥಾನಮಾನಗಳು ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಬಿಲ್ಲವ ಸಂಘಟನೆಗಳಿಂದ ಸಕಾರಾತ್ಮಕ ಹೋರಾಟಗಳು ಎಂದರು.

ಬ್ರಹ್ಮಶ್ರೀ ಗುರುಗಳ ತತ್ವಾದರ್ಶಗಳನ್ನು ಮರೆತಿರುವುದರಿಂದ ಪ್ರತಿಯೊಂದು ವಿಷಯದಲ್ಲೂ ನಾವು ಬಲಿಪಶುಗಳಾಗುತ್ತಿದ್ದೇವೆ. ೧೮ ಪುರಾಣಗಳ ಅಧ್ಯಯನ ಮಾಡಿದಾಗ ಮಾತ್ರ ಪ್ರತಿಯೊಂದು ವಿಷಯದಲ್ಲೂ ಬಿಲ್ಲವರು ಪ್ರಜ್ಞಾವಂತರಾಗಿ, ಪೂರ್ವಾಪರ ಅರಿತು ಹೆಜ್ಜೆ ಇಡುವಂತಾಗುತ್ತದೆ. ಇಲ್ಲವಾದಲ್ಲಿ ನಮ್ಮ ಯುವಜನರು ಪುಕ್ಕಟೆ ಬಲಿಪಶುಗಳಾಗಬೇಕಾಗುತ್ತದೆ ಎಂದವರು ಹೇಳಿದರು.

ತಾಲೂಕು ಬಿಲ್ಲವ ಸಂಘದ ಪ್ರಧಾನ ಸಂಘಟಕ ಚರಣ್ ಕೆ, ಗೌರವಾಧ್ಯಕ್ಷ ರಂಜನ್ ಮಿಜಾರ್ ಅವರು ತಾಲೂಕು ಸಂಘದ ರಚನೆಯ ಉದ್ದೇಶ ವಿವರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಲೋಕನಾಥ ಪೂಜಾರಿ ಪ್ರಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಪುರುಷೋತ್ತಮ ಪೂಜಾರಿ ಸ್ವಾಗತಿಸಿ, ಸಭೆ ನಿರೂಪಿಸಿದರು. ಸಭೆಯಲ್ಲಿ ಬಿಲ್ಲವ ಮುಖಂಡರಾದ ಗಣೇಶ್ ಪೂಜಾರಿ ಗಂಜಿಮಠ, ಹರಿಪ್ರಸಾದ್ ಉರ್ವ, ಅವಿನಾಶ್ ಪೂಜಾರಿ ಪಾಲ್ದನೆ, ಸುರೇಂಶ್ಚಂದ್ರ ಕೋಟ್ಯಾನ್, ರವಿಕಲಾ, ಉಮಾ ಎಸ್, ದಿವಾಕರ ಬಿ. ಪಿ, ಸುನೀಲ್ ಗುರುಪುರ, ರಾಘವ ಕೆ, ರಾಮಚಂದ್ರ, ಶಶಿಧರ ಮಂಗಳೂರು, ಪದ್ಮನಾಭ ಕೋಟ್ಯಾನ್, ತುಕಾರಾಮ ಪೂಜಾರಿ, ಉರ್ವ ಬಿಲ್ಲವ ಸಂಘದ ಗೌರವಾಧ್ಯಕ್ಷ ಬಿ. ಜಿ ಸುವರ್ಣ, ರಾಕೇಶ್, ಮುಕೇಶ್ ಮೂಡುಶೆಡ್ಡೆ, ಚಂದ್ರಶೇಖರ ಕುಳಾಯಿ, ಸುರೇಶ್ ವಿ. ಪೂಜಾರಿ ಕುಳಾಯಿ, ವಿದ್ಯಾ ಆರ್, ಜಯರಾಮ ಪೂಜಾರಿ ಶಕ್ತಿನಗರ, ರವಿ ಸೂರಿಂಜೆ ಹಾಗೂ ಬಿಲ್ಲವ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಪಾರ್ವತಿ ಅಮೀನ್ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter