ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಆದರ್ಶ ಶಿಕ್ಷಕ: ರಾಧಾಕೃಷ್ಣ ಭಟ್ ಕೆ
ಕೈಕಂಬ : ಪೊಳಲಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಗಣಿತ ಶಿಕ್ಷಕ ರಾಧಾಕೃಷ್ಣ ಭಟ್ ಕೆ. ಇವರನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾ ಘಟಕದಿಂದ ಆದರ್ಶ ಶಿಕ್ಷಕ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.
ಪೊಳಲಿಯಲ್ಲಿ ಏರ್ಪಡಿಸಲಾದ ಸಾಹಿತ್ಯ ಕಮ್ಮಟದಲ್ಲಿ ಕ.ಚು.ಸಾ.ಪ. ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಫಲಕ ನೀಡಿ ಸನ್ಮಾನಿಸಿದರು. ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿ ಅಭಿನಂದನಾ ಭಾಷಣ ಮಾಡಿದರು. ರಾಧಾಕೃಷ್ಣ ಭಟ್ಟರು ಬಂಟ್ವಾಳ ಶಿಕ್ಷಣ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ಗಣಿತ ವಿಷಯದಲ್ಲಿ ಜಿಲ್ಲಾ ತರಬೇತುದಾರರಾಗಿ, ಸ್ಕೌಟಿಂಗ್‌ನಲ್ಲಿ ಅಸಿಸ್ಟೆಂಟ್ ಲೀಡರ್ ಆಗಿ ಸೇವೆಸಲ್ಲಿಸಿದ್ದಾರೆ. ಉತ್ತಮ ಶಿಕ್ಷಕರಾಗಿ, ಸಂಘಟಕರಾಗಿದ್ದು ಸಾರ್ವಜನಿಕವಾಗಿ ಗುರುತಿಸ್ಪಟ್ಟಿದ್ದಾರೆ ಎಂದರು.
ಅತಿಥಿಗಳಾಗಿ ಡಾ. ಕೊಳಪೆ ಗೋವಿಂದ ಭಟ್ , ಡಾ. ವಾಣಿಶ್ರೀ ಕಾಸರಗೋಡು, ಕವಯಿತ್ರಿ ಶಿಕ್ಷಕಿ ಶಾಂತಾÀ ಪುತ್ತೂರು, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.