ಪೊಳಲಿ ದೇವಳದ ವತಿಯಿಂದ ಮಹಿಳೆಯರಿಗೆ ಕಸ್ತೂರಿ,ಅರಶಿಣ ಕುಂಕುಮ, ಬಳೆ ವಿತರಣೆ
ಪೊಳಲಿ: ಆಯುಕ್ತರ ಕಾರ್ಯಾಲಯ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗಳ ವತಿಯಿಂದ ಆ.೦೫ರಂದು ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವೃತದ ಪ್ರಯುಕ್ತ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ,ಬಳೆ, ಅರಶಿಣ ಕುಂಕುಮ ದೇವಸ್ಥಾನದ ವತಿಯಿಂದ ನೀಡಲಾಯಿತು.

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ /ಹೆಣ್ಣಿಗೆ ಬಹಳ ಮಹತ್ವ ಪೂರ್ಣವಾದ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದ್ದು, ಪ್ರತೀ ವರ್ಷ ಶ್ರೀವರಮಹಾಲಕ್ಷ್ಮಿ ವೃತ, ಸ್ವರ್ಣ ಮತ್ತು ನವರಾತ್ರಿಗಳಲ್ಲಿಯೂ ಸಹ ಸ್ತ್ರೀ ದೇವತೆಯನ್ನು ಪೂಜಿಸಿ ಆರಾಧಿಸಲಾಗುತ್ತದೆ. ಅದರಂತೆ ಪ್ರತಿ ವರ್ಷದ ಶ್ರಾವಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ ಮೊದಲ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮಿ ವ್ರತ ಆಚರಿಸುವುದು ಪುರಾಣೋಕ್ತವಾಗಿದ್ದು, ಆ ದಿನ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿ ಪ್ರಸ್ತಾಧಿಗಳನ್ನು ನೈವ್ಯದ್ಯ ಮಾಡಿ ಪ್ರಸಾದವನ್ನು ಸ್ವೀಕರಿಸಿದಲ್ಲಿ ಸಕಲ ಸೌಭಾಗ್ಯಗಳೂ, ಅಷ್ಟ ಐಶ್ವರ್ಯಗಳೂ, ಚತುರ್ವಿದಫಲಗಳೂ, ಧನ ಧಾನ್ಯಧಿಗಳೂ ಲಭಿಸುತ್ತವೆ ಎಂದು ಹೇಳಲ್ಪಟ್ಟಿರುವುದರಿಂದ ಮಹಿಳೆಯರು ಈ ದಿನ ಬಹಳ ಭಕ್ತಿಭಾವಗಳಿಂದ ಮನೆಯಲ್ಲಿ ಶುದ್ದಿಯಾಗಿ ಶ್ರೀ ವರಮಹಾಲಕ್ಷ್ಮಿಯನ್ನು ಪೂಜೆ ಮಾಡಿ, ದೇವಾಲಯಗಳಿಗೆ ದೇವರ ದರ್ಶನಾರ್ಥಿಗಳಾಗಿ ಬಂದು ದೇವರ ಪ್ರಸಾದಗಳಾದ ಅರಶಿನ, ಕುಂಕುಮ, ಹೂವು ಮುಂತಾದ ಪ್ರಸಾದಗಳನ್ನು ಸ್ವೀಕರಿಸುವ ಸಂಪ್ರದಾಯವು ಸಹ ಇರುತ್ತದೆ.

ನಾಡಿನ ಸಮಸ್ತ ಮಹಿಳೆಯರನ್ನು ಗೌರವಿಸುವ ಸಲುವಾಗಿ ಹಾಗೂ ಶ್ರೀವರಮಹಾಲಕ್ಷ್ಮಿಯವರ ಕೃಪಾ ಕಟಾಕ್ಷವು ಲಭಿಸಲೆಂದು ಶ್ರೀ ವರಮಹಾಲಕ್ಷ್ಮಿ ವೃತದ ದಿನದಂದು ಅಧಿಸೂಚಿತ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ ಅರಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡುವುದು ಸೂಕ್ತವಾಗಿರುತ್ತದೆ ಎಂಬುದಾಗಿ ಜು.18 ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ನಿರ್ಣಯಿಸಲಾಗಿತ್ತು.





ಪೊಳಲಿ ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಅನುವಂಶಿಕ ಮೊಕ್ತೇಸರ ಯು. ತಾರಾನಾಥ ಆಳ್ವ , ಚೇರ ಸೂರ್ಯನಾರಾಯಣ ರಾವ್, ಪ್ರದಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರಭಟ್, ರಾಮ್ ಭಟ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಧಾರ್ಮಿಕ ದತ್ತಿ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ವೆಂಕಟೇಶ್ ನಾವಡ ಪೊಳಲಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.