ಪೆರಾಜೆ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ಮತ್ತು ರಕ್ಷಾ ಬಂಧನ ಉತ್ಸವ
ಬಂಟ್ವಾಳ: ಶ್ರೀ ಮಹಾಲಕ್ಷ್ಮಿ ಮಹಿಳಾ ಸೇವಾ ಸಮಿತಿ ಪೆರಾಜೆ ಇದರ ವತಿಯಿಂದ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ೧೫ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ಮತ್ತು ರಕ್ಷಾ ಬಂಧನ ಉತ್ಸವ ಜರಗಿತು.

ಹಿಂದು ಜಾಗರಣ ವೇದಿಕೆಯ ಪ್ರಾಂತ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ ಧಾರ್ಮಿಕ ಉಪನ್ಯಾಸ ನೀಡಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರೀ ಗುಡ್ಡ ಚಾಮುಂಡೇಶ್ವರಿ ಸೇವಾ ಟ್ರಸ್ಟ್ನ ಅಧ್ಯಕ್ಷ ಮಾಧವ ಪಾಳ್ಯ , ಶ್ರೀನಿವಾಸ ಪೂಜಾರಿ ಸಹಕರಿಸಿದರು. ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಸುಂದರಿ ಶೆಟ್ಟಿ ಪಾನೂರು , ಗೌರವಾಧ್ಯಕ್ಷೆ ಭಾರತಿ ಪೆರಾಜೆ , ಪದಾಧಿಕಾರಿಗಳಾದ ಪಣಿಫ ಮಾಧವ, ವೀಣಾ , ರತ್ನಾ, ಶಶಿಕಲಾ, ಗುಲಾಬಿ, ಲೀಲಾವತಿ, ಮಮತ, ಧನಲಕ್ಷ್ಮಿ, ಜಯಲಕ್ಷ್ಮಿ ಮೊದಲಾದವರು ವ್ಯವಸ್ಥೆಗೊಳಸಿದ್ದರು.