ಬಂಟ್ವಾಳ: ವರ್ತಕರ ಸಹಕಾರಿ ಸಂಘ ಶೇ ೧೨ ಡಿವಿಡೆಂಡ್ ಘೋಷಣೆ
ಬಂಟ್ವಾಳ: ವರ್ತಕರ ಸಹಕಾರಿ ಸಂಘದ ವತಿಯಿಂದ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿದರು.
ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಜು.31ರಂದು ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ವೇಳೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ೬ ಮಂದಿ ಮತ್ತು ಶೇ ೯೦ ಕ್ಕಿಂತ ಹೆಚ್ಚು ಅಂಕ ಗಳಿಸಿದ ೨೫ ವಿದ್ಯಾರ್ಥಿಗಳನ್ನು ಅಭಿನಂದನೆ ಹಾಗೂ ೪೯ ಮಂದಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಧನ ವಿತರಣೆ ನಡೆಯಿತು. ಹಿರಿಯ ಶಾಖಾಧಿಕಾರಿ ಸದಾಶಿವ ಆರ್. ಪುತ್ರನ್ ಇವರನ್ನು ಸನ್ಮಾನಿಸಲಾಯಿತು.
ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅಜಿತ್ ಕುಮಾರ್, ಹಿರಿಯ ಪ್ರಬಂಧಕ ಮೋಹನ್ ಜಿ. ಮೂಲ್ಯ, ಉಪಾಧ್ಯಕ್ಷ ಮಂಜುನಾಥ ರೈ, ನಿರ್ದೇಶಕರಾದ ಮೈಕಲ್ ಡಿ’ಕೋಸ್ತಾ, ಸುಧಾಕರ್ ಸಾಲ್ಯಾನ್, ವಿಜಯಕುಮಾರಿ ಇಂದ್ರ, ಜೆ.ಗಜೇಂದ್ರ ಪ್ರಭು, ಸ್ವಪ್ನರಾಜ್, ರಾಜೇಶ್ ಬಿ., ಹೇಮಂತ್ ಕುಮಾರ್ ಜೈನ್, ರವೀಂದ್ರ, ದಿವಾಕರ ದಾಸ್, ನಾರಾಯಣ ಸಿ. ಪೆರ್ನೆ ಇದ್ದರು.