ರೋಟರಿ ಕ್ಲಬ್ ವತಿಯಿಂದ ಸಜಿಪಮೂಡ ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಹಸ್ತಾಂತರ
ಬಂಟ್ವಾಳ: ರೋಟರಿ ಕ್ಲಬ್ ವತಿಯಿಂದ ಸಜಿಪಮೂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಹಸ್ತಾಂತರ ಮತ್ತು ಹಣ್ಣಿನ ಗಿಡ ನೆಡುವ ಕಾರ್ಯಕ್ರಮ ಶುಕ್ರವಾರ ನಡೆಯಿತು. ಕ್ಲಬ್ಬಿನ ಅಧ್ಯಕ್ಷ ಪುಷ್ಪರಾಜ ಹೆಗ್ಡೆ, ಇಂರ‍್ಯಾಕ್ಟ್ ಕ್ಲಬ್ ಅಧ್ಯಕ್ಷೆ ರೈಹೆನಾ ಬಾನು, ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಪಿ.ಎನ್., ಪ್ರಮುಖರಾದ ಮಹಮ್ಮದ್ ವಳವೂರು, ರಿತೇಶ್ ಬಾಳಿಗ, ಪ್ರಕಾಶ್ ಬಾಳಿಗ, ಪ್ರತಿಭಾ ಎ. ರೈ, ಮೇಘಾ ಆಚಾರ್ಯ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಜಯಪ್ರಕಾಶ್ ಪೆರ್ವ ಮತ್ತಿತರರು ಇದ್ದರು.
