ಬಂಟ್ವಾಳ ಹಲವೆಡೆ ಸಂಭ್ರಮದ ವರಮಹಾಲಕ್ಷ್ಮಿ ಪೂಜೆ
ಬಂಟ್ವಾಳ: ತಾಲ್ಲೂಕಿನ ಮಾಣಿ ಸಮೀಪದ ಪೆರಾಜೆ ಶ್ರೀ ಮಹಾಲಕ್ಷ್ಮಿ ಮಹಿಳಾ ಸೇವಾ ಸಮಿತಿ ವತಿಯಿಂದ ೧೫ನೇ ವರ್ಷದ ಸಾಮೂಹಿಕ ಶ್ರೀ ವರಾಮಹಾಲಕ್ಷ್ಮಿ ಪೂಜೆ ಮತ್ತು ರಕ್ಷಾಬಂಧನ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಬಂಟ್ವಾಳ ತಾಲ್ಲೂಕಿನ ಹಲವೆಡೆ ವಿವಿಧ ದೇವಸ್ಥಾನ ಮತ್ತು ಮಹಿಳಾ ಸಂಘ ಸಂಸ್ಥೆಗಳ ಮೂಲಕ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಆ.05ರಂದು ಶುಕ್ರವಾರ ಸಂಭ್ರಮದಿಂದ ನಡೆಯಿತು.
ಇಲ್ಲಿನ ಮಾಣಿ ಸಮೀಪದ ಪೆರಾಜೆ ಶ್ರೀ ಮಹಾಲಕ್ಷ್ಮಿ ಮಹಿಳಾ ಸೇವಾ ಸಮಿತಿ ವತಿಯಿಂದ ೧೫ನೇ ವರ್ಷದ ಸಾಮೂಹಿಕ ಶ್ರೀ ವರಾಮಹಾಲಕ್ಷ್ಮಿ ಪೂಜೆ ಮತ್ತು ರಕ್ಷಾಬಂಧನ ಕಾರ್ಯಕ್ರಮ ಹಿಂದು ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಧಾರ್ಮಿಕ ಉಪನ್ಯಾಸ ನೀಡಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಶುಭ ಹಾರೈಸಿದರು.
ಶ್ರೀ ಗುಡ್ಡಚಾಮುಂಡೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷ ಮಾಧವ ಪಾಳ್ಯ, ಶ್ರೀನಿವಾಸ ಪೂಜಾರಿ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಸುಂದರಿ ಶೆಟ್ಟಿ ಪಾನೂರು, ಗೌರವಾಧ್ಯಕ್ಷೆ ಭಾರತಿ ಪೆರಾಜೆ, ಪದಾಧಿಕಾರಿಗಳಾದ ಮಾಧವ, ವೀಣಾ , ರತ್ನಾ, ಶಶಿಕಲಾ, ಗುಲಾಬಿ, ಲೀಲಾವತಿ, ಮಮತಾ, ಧನಲಕ್ಷ್ಮಿ, ಜಯಲಕ್ಷ್ಮಿ ಮತ್ತಿತರರು ಇದ್ದರು.
ಇಲ್ಲಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಪ್ರಯುಕ್ತ ಮಹಿಳೆಯರಿಗೆ ಅರಸಿನ ಕುಂಕುಮ ಮತ್ತು ಬಳೆ ವಿತರಣೆ ನಡೆಯಿತು. ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ, ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಾವಿನಕಟ್ಟೆ ಮಹಿಳಾ ಸೇವಾ ಸಮಿತಿ, ವೀರಕಂಭ ಶ್ರೀ ಶಾರದಾ ಭಜನಾ ಮಂದಿರ ಸಹಿತ ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ವತಿಯಿಮದ ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ಸಾಮೂಹಿಕ ಪೂಜೆ ನಡೆಯಿತು. ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನದಲ್ಲಿ ಕುಲಾಲ ಮಹಿಳಾ ಸಂಘದ ವತಿಯಿಂದ ಶುಕ್ರವಾರ ಸಂಜೆ ಸಾಮೂಹಿಕ ಪೂಜೆ ನಡೆಯಿತು. ಮಾಣಿಲ ಶ್ರೀಧಾಮ ಮಹಾಲಕ್ಷ್ಮಿ ದೇವಸ್ಥಾನ, ಮಣಿನಾಲ್ಕೂರು ಗ್ರಾಮದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಶ್ರೀ ವರಾಮಹಾಲಕ್ಷ್ಮಿ ಪೂಜೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಪಾಲ್ಗೊಂಡರು.