ಬೆಳ್ಳೂರು: ೭ ರಂದು ಆಟಿದ ಕೂಟ
ಬಂಟ್ವಾಳ: ಇಲ್ಲಿನ ಬೆಳ್ಳೂರು ವಲಯ ಬಂಟರ ಸಂಘದ ವತಿಯಿಂದ ಸ್ಥಳೀಯ ಐದು ಗ್ರಾಮಗಳ ಬಂಟರ ಕೂಡುವಿಕೆಯಲ್ಲಿ ಇದೇ ೭ರಂದು ಕಾವೇಶ್ವರ ದೇವಸ್ಥಾನ ಬಳಿ ‘ಆಟಿದ ಕೂಟ’ ಕಾರ್ಯಕ್ರಮ ಆಯೋಜಿಸಲಾಗಿದೆ. ಕರಿಯಂಗಳ, ಕುರಿಯಾಳ, ಅಮ್ಮುಂಜೆ, ಬಡಗಬೆಳ್ಳೂರು ಮತ್ತು ತೆಂಕಬೆಳ್ಳೂರು ಗ್ರಾಮಗಳ ಬಂಟರು ಈ ಕೂಟದಲ್ಲಿ ಭಾಗವಹಿಸಲಿದ್ದು, ವಿವಿಧ ಬಗೆಯ ಆಹಾರ ಮೇಳ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
