ಬದನಡಿ ಕ್ಷೇತ್ರ: ೭ ರಂದು ‘ಯಕ್ಷ ನಾಟ್ಯ ಹಾಸ್ಯ ವೈಭವ’
ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ಇದೇ ೭ರಂದು ಮಧ್ಯಾಹ್ನ ೨.೩೦ ಗಂಟೆಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷ ನಾಟ್ಯ ಹಾಸ್ಯ ವೈಭವ’ ಕಾರ್ಯಕ್ರಮ ನಡೆಯಲಿದೆ.
ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು, ಧನಂಜಯ ಕೊಯಿಲ, ಚೈತನ್ಯಕೃಷ್ಣ ಪದ್ಯಾಣ, ಶಿತಿಕಂಠ ಭಟ್, ಮುರಾರಿ ಭಟ್, ಮುಮ್ಮೇಳದಲ್ಲಿ ಸೀತಾರಾಮ ಕುಮಾರ್ ಕಟೀಲು, ದೀನೇಶ ಕೋಡಪದವು, ವಾದಿರಾಜ ಕಲ್ಲೂರಾಯ, ಪ್ರೇಮ್ ರಾಜ್ ಕೊಯಿಲ, ಲೋಕೇಶ ಮುಚ್ಚೂರು ಮತ್ತಿತರ ಕಲಾವಿದರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.